ADVERTISEMENT

ಎಸ್‌ಬಿಐನಿಂದ 28ರಂದು ಗ್ರಾಹಕರ ಸಭೆ

ಪಿಟಿಐ
Published 24 ಮೇ 2019, 18:32 IST
Last Updated 24 ಮೇ 2019, 18:32 IST
ಎಸ್‌ಬಿಐ ಲಾಂಛನ
ಎಸ್‌ಬಿಐ ಲಾಂಛನ   

ಮುಂಬೈ: ಗ್ರಾಹಕರ ಕುಂದುಕೊರತೆ ಆಲಿಸಲು ಮತ್ತು ಸೇವಾ ಗುಣಮಟ್ಟ ಹೆಚ್ಚಿಸುವ ಸಂಬಂಧ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ಇದೇ 28ರಂದು ದೇಶದಾದ್ಯಂತ ಗ್ರಾಹಕರ ಸಭೆ ನಡೆಸಲಿದೆ.

‘ಬ್ಯಾಂಕ್‌ನ 17 ಪ್ರಾದೇಶಿಕ ಕಚೇರಿಗಳ ವ್ಯಾಪ್ತಿಯಲ್ಲಿನ 500 ಸ್ಥಳಗಳಲ್ಲಿ ಈ ಸಭೆ ಆಯೋಜಿಸಲಾಗುತ್ತಿದೆ. ಗ್ರಾಹಕರ ಜತೆ ಬೆರೆತು ಬ್ಯಾಂಕ್‌ನಲ್ಲಿನ ಅವರ ವಿಶ್ವಾಸ ಹೆಚ್ಚಿಸಲು ಈ ಸಭೆ ಆಯೋಜಿಸಲಾಗುತ್ತಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವರ ನಿರೀಕ್ಷೆಗಳನ್ನು ಈಡೇರಿಸಿಕೊಳ್ಳಲು ಬ್ಯಾಂಕ್‌ಗೆ ನೆರವಾಗಲಿದ್ದಾರೆ. ಒಂದು ಲಕ್ಷ ಗ್ರಾಹಕರು ಈ ಸಭೆಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ವ್ಯವಸ್ಥಾಪಕ ನಿರ್ದೇಶಕ (ರಿಟೇಲ್‌ ಮತ್ತು ಡಿಜಿಟಲ್‌) ಪಿ. ಕೆ. ಗುಪ್ತ ಹೇಳಿದ್ದಾರೆ.

ಸಭೆಯಲ್ಲಿ ಗ್ರಾಹಕರು, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಸೇವೆ ಸುಧಾರಣೆಗೆ ಅಗತ್ಯ ಸಲಹೆಗಳನ್ನು ಬ್ಯಾಂಕ್‌ ಸಿಬ್ಬಂದಿ ಜತೆ ಹಂಚಿಕೊಳ್ಳಬಹುದು. ಗ್ರಾಹಕರು ಡಿಜಿಟಲ್‌ ಬ್ಯಾಂಕಿಂಗ್‌ನ ಯೋನೊ ಆ್ಯಪ್‌ ಬಳಕೆಯ ಅರಿವು ಮೂಡಿಸಲಾಗುವುದು ಎಂದು ಬ್ಯಾಂಕ್‌ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.