ADVERTISEMENT

ಬಡ್ಡಿದರ ಇಳಿಸಿದ ಎಸ್‌ಬಿಐ

ಪಿಟಿಐ
Published 19 ಮೇ 2025, 15:32 IST
Last Updated 19 ಮೇ 2025, 15:32 IST
ಎಸ್‌ಬಿಐ
ಎಸ್‌ಬಿಐ   

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.20ರಷ್ಟು ಕಡಿತಗೊಳಿಸಿದೆ. ಪರಿಷ್ಕೃತ ದರವು ಮೇ 16ರಿಂದ ಜಾರಿಗೆ ಬಂದಿದೆ.

ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿಗೆ ಗರಿಷ್ಠ ಶೇ 6.7ರಷ್ಟು ಬಡ್ಡಿ ದರ ನೀಡಲಾಗುವುದು. ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ 6.55ರಷ್ಟು ಬಡ್ಡಿದರ ಇರಲಿದೆ. ಐದರಿಂದ ಹತ್ತು ವರ್ಷದೊಳಗಿನ ಠೇವಣಿಗೆ ಶೇ 6.30 ಮತ್ತು ಒಂದು ವರ್ಷದಿಂದ ಎರಡು ವರ್ಷದೊಳಗಿನ ಠೇವಣಿಗೆ ಶೇ 6.5 ಇರಲಿದೆ ಎಂದು ಬ್ಯಾಂಕ್‌ ಸೋಮವಾರ ತಿಳಿಸಿದೆ. 

‘ಅಮೃತ್ ವೃಷ್ಟಿ’ (444 ದಿನ) ಯೋಜನೆಗೆ ಬಡ್ಡಿ ದರವನ್ನು ಶೇ 7.05ರಿಂದ ಶೇ 6.85ಕ್ಕೆ ಇಳಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಅತಿ ಹಿರಿಯ ನಾಗರಿಕರು (80 ವರ್ಷ ಮೇಲ್ಪಟ್ಟವರು) ಹೆಚ್ಚಿನ ಬಡ್ಡಿ ದರ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದು ತಿಳಿಸಿದೆ. 

ADVERTISEMENT

ಕಳೆದ ತಿಂಗಳು ಆರ್‌ಬಿಐ ರೆಪೊ ದರ ಕಡಿತ ಮಾಡಿತ್ತು. ಹೀಗಾಗಿ ಎಸ್‌ಬಿಐ, ರೆಪೊ ದರ ಆಧರಿಸಿದ ಸಾಲದ ಮೇಲಿನ ಬಡ್ಡಿದರವನ್ನು ಶೇ 0.10ರಿಂದ ಶೇ 0.25ರಷ್ಟು ಇಳಿಸಿತ್ತು. ಇದೀಗ ಬ್ಯಾಂಕ್‌ ಎರಡನೇ ಬಾರಿಯೂ ಬಡ್ಡಿ ದರ ಕಡಿತಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.