ADVERTISEMENT

ಎಸ್‌ಬಿಐ: ಕೇಂದ್ರಕ್ಕೆ ₹8,076 ಕೋಟಿ ಲಾಭಾಂಶ ಪಾವತಿ

ಪಿಟಿಐ
Published 9 ಜೂನ್ 2025, 16:33 IST
Last Updated 9 ಜೂನ್ 2025, 16:33 IST
ಎಸ್‌ಬಿಐ
ಎಸ್‌ಬಿಐ   

ನವದೆಹಲಿ: 2024–25ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ₹8,076 ಕೋಟಿ ಲಾಭಾಂಶವನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ಸೋಮವಾರ ಪಾವತಿಸಿದೆ. 2023–24ರ ಇದೇ ಅವಧಿಯಲ್ಲಿ ₹6,959 ಕೋಟಿ ಲಾಭಾಂಶ ಪಾವತಿಸಲಾಗಿತ್ತು.

ಎಸ್‌ಬಿಐ ಅಧ್ಯಕ್ಷ ಸಿ.ಎಸ್‌.ಸೆಟ್ಟಿ ಅವರು ಲಾಭಾಂಶದ ಚೆಕ್‌ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಸ್ತಾಂತರಿಸಿದರು ಎಂದು ಹಣಕಾಸು ಸಚಿವಾಲಯದ ಕಚೇರಿ ‘ಎಕ್ಸ್‌’ನಲ್ಲಿ ತಿಳಿಸಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಪ್ರತಿ ಈಕ್ವಿಟಿ ಷೇರಿಗೆ ₹15.90 ಲಾಭಾಂಶ ಘೋಷಿಸಲಾಗಿದೆ. 2023–24ರ ಇದೇ ಅವಧಿಯಲ್ಲಿ ₹13.70 ಲಾಭಾಂಶ ನೀಡಲಾಗಿತ್ತು.  

ADVERTISEMENT

2024–25ರ ಆರ್ಥಿಕ ವರ್ಷದ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 16ರಷ್ಟು ಹೆಚ್ಚಳವಾಗಿದ್ದು, ₹70,901 ಕೋಟಿಯಷ್ಟು ದಾಖಲೆಯ ಲಾಭ ಗಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.