ADVERTISEMENT

ಫ್ರಾಂಕ್ಲಿನ್ ಟೆಂಪಲ್ಟನ್ ಕೇಸ್: 9,122 ಕೋಟಿ ವಿತರಿಸಲು ಸುಪ್ರೀಂಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 3:43 IST
Last Updated 3 ಫೆಬ್ರುವರಿ 2021, 3:43 IST
ಸುಪ್ರೀಂ ಕೋರ್ಟ್: ರಾಯಿಟರ್ಸ್ ಚಿತ್ರ
ಸುಪ್ರೀಂ ಕೋರ್ಟ್: ರಾಯಿಟರ್ಸ್ ಚಿತ್ರ   

ನವದೆಹಲಿ: ಫ್ರಾಂಕ್ಲಿನ್ ಟೆಂಪಲ್ಟನ್‌ನ 6 ಮ್ಯೂಚುವಲ್‌ ಫಂಡ್ ಯೋಜನೆಗಳ ಹೂಡಿಕೆದಾರರಿಗೆ ₹ 9,122 ಕೋಟಿ ಹಣ ವಿತರಿಸುವಂತೆ ಸುಪ್ರೀಂಕೋರಟ್‌ ನಿರ್ದೆಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರಿದ್ದ ವಿಭಾಗೀಯ ಪೀಠವು ಯೋಜನೆಯ ಆಸ್ತಿಗಳ ಮೇಲಿನ ಬಡ್ಡಿಗೆ ಅನುಗುಣವಾಗಿ ₹ 9,122 ಕೋಟಿ ವಿತರಿಸುವಂತೆ ಹೇಳಿದೆ.

ಮಾತುಕತೆ ಮೂಲಕ ಈ ವಿತರಣಾ ವ್ಯವಸ್ಥೆಗೆ ಎಲ್ಲರೂ ಒಪ್ಪಿದ ನಂತರ, ಫಂಡ್‌ ವಿತರಿಸುವ ಕೆಲಸ ಆರಂಭಿಸುವಂತೆ ಎಸ್‌ಬಿಐಗೆ ತಾಕೀತು ಮಾಡಿದೆ. 20 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದೆ.

ADVERTISEMENT

ಫ್ರಾಂಕ್ಲಿನ್ ಟೆಂಪಲ್ಟನ್ ಟ್ರಸ್ಟ್ಸ್ ಸರ್ವೀಸಸ್ ಲಿಮಿಟೆಡ್ ಮತ್ತು ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಅನ್ನು ಪ್ರತಿನಿಧಿಸುವ ವಕೀಲರು, ಎಸ್‌ಬಿಐ ಮ್ಯೂಚುಯಲ್ ಫಂಡ್‌ಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಒಪ್ಪಿಕೊಂಡರು.

ಈ ಪ್ರಕ್ರಿಯೆಯಲ್ಲಿ ಯಾವುದೇ ತೊಡಕು ಕಮಡುಬಂದರೆ ಅರ್ಜಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ.

ಜನವರಿ 25 ರಂದು, ಫ್ರಾಂಕ್ಲಿನ್ ಟೆಂಪಲ್ಟನ್ ಸಂಸ್ಥೆಯ ಆರು ಮ್ಯೂಚುಯಲ್ ಫಂಡ್ ಯೋಜನೆಗಳನ್ನು ಮುಕ್ತಾಯಗೊಳಿಸಲು ಮತ್ತು ಯುನಿಟ್ ಹೋಲ್ಡರ್‌ಗಳಿಗೆ ಹಣವನ್ನು ವಿತರಿಸಲು ಇ-ಮತದಾನ ಪ್ರಕ್ರಿಯೆಗೆ ಆಕ್ಷೇಪಣೆಯ "ವಿವಾದಾತ್ಮಕ" ಸಮಸ್ಯೆಯನ್ನು ಮೊದಲು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿತ್ತು.

ಇ-ಮತದಾನ ಪ್ರಕ್ರಿಯೆಯ ಮೇಲ್ವಿಚಾರಣೆಗೆ ವೀಕ್ಷಕರನ್ನು ನೇಮಿಸುವಂತೆ ನ್ಯಾಯಾಲಯ ಈ ಹಿಂದೆ ಸೆಬಿಗೆ ಸೂಚಿಸಿತ್ತು. ಈ ಮತದಾನ ಪ್ರಕ್ರಿಯೆ ಡಿಸೆಂಬರ್ ಕೊನೆಯ ವಾರದಲ್ಲಿ ನಡೆದಿತ್ತು. ಅಲ್ಲದೆ, ಬಹುಮತದ ಮೂಲಕ ಅನುಮೋದಿನೆ ಪಡೆದಿತ್ತು. ಇದರ ಜೊತೆಗೆ, ಅಂತಿಮ ಲೆಕ್ಕಪರಿಶೋಧನಾ ವರದಿಯ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ನ್ಯಾಯಾಲಯವು ಸೆಬಿಗೆ ನಿರ್ದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.