ADVERTISEMENT

ಎಸ್‌ಡಿಎಂ ಫಾರ್ಮಸಿಯಿಂದ ‘ಮಂಜುಶ್ರೀ’ ಕೇಶ ತೈಲ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 15:58 IST
Last Updated 19 ಡಿಸೆಂಬರ್ 2022, 15:58 IST

ಬೆಂಗಳೂರು: ಉಡುಪಿಯ ಎಸ್‍ಡಿಎಮ್ ಫಾರ್ಮಸಿ, ಕೂದಲುಗಳ ಆರೋಗ್ಯಕ್ಕೆ ಸಾಂಪ್ರದಾಯಿಕ ಆರೋಗ್ಯ ಸೂತ್ರಗಳನ್ನು ಆಧರಿಸಿದ ‘ಮಂಜುಶ್ರೀ ಹೇರ್ ಆಯಿಲ್’ ಅಭಿವೃದ್ಧಿಪಡಿಸಿದೆ.

ಇದು ಕೂದಲಿಗೆ ರಕ್ಷಣೆ ನೀಡುತ್ತದೆ ಹಾಗೂ ಕೂದಲಿಗೆ ಪೌಷ್ಠಿಕಾಂಶವನ್ನು ನೀಡುತ್ತದೆ ಎಂದು ಪ್ರಕಟಣೆ ತಿಳಿಸಿದೆ. ತಲೆ ಹೊಟ್ಟಿನ ಸಮಸ್ಯೆ ವಿರುದ್ಧ ಹೋರಾಡುವ ಸಾಮರ್ಥ್ಯ ಇದಕ್ಕೆ ಇದೆ ಎಂದು ಕೂಡ ಪ್ರಕಟಣೆ ತಿಳಿಸಿದೆ.

‘ಮಂಜುಶ್ರೀ’ ಕೇಶ ತೈಲವು ವಿವಿಧ ಗಿಡಮೂಲಿಕೆಗಳನ್ನು ಒಳಗೊಂಡಿದೆ. ಕೂದಲಿನ ಬುಡಕ್ಕೆ ಬೆರಳ ತುದಿಗಳಿಂದ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಕೂದಲಿನ ಬುಡಗಳು ಬಲಗೊಳ್ಳುತ್ತವೆ ಎಂದು ಫಾರ್ಮಸಿಯ ಮುಖ್ಯ ಪ್ರಬಂಧಕರಾದ ಡಾ. ಮುರಳೀಧರ ಆರ್. ಬಲ್ಲಾಳ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.