ADVERTISEMENT

400 ಅಂಶ ಕುಸಿದ ಸೆನ್ಸೆಕ್ಸ್

ಪಿಟಿಐ
Published 17 ಫೆಬ್ರುವರಿ 2021, 16:35 IST
Last Updated 17 ಫೆಬ್ರುವರಿ 2021, 16:35 IST
   

ಮುಂಬೈ: ಸತತ ಎರಡನೆಯ ದಿನವೂ ಮಾರಾಟದ ಒತ್ತಡಕ್ಕೆ ಒಳಗಾದ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್, 400 ಅಂಶ ಕುಸಿಯಿತು. ಐ.ಟಿ., ಎಫ್‌ಎಂಸಿಜಿ ವಲಯದ ಷೇರುಗಳು ಲಾಭ ಗಳಿಕೆಯ ಉದ್ದೇಶದ ಮಾರಾಟಕ್ಕೆ ಒಳಗಾದವು. ರೂಪಾಯಿ ಮೌಲ್ಯ ಕುಸಿದಿದ್ದು ಕೂಡ ಹೂಡಿಕೆದಾರರ ಮೇಲೆ ಪ್ರಭಾವ ಬೀರಿತು ಎಂದು ವರ್ತಕರು ಹೇಳಿದ್ದಾರೆ.

ಬುಧವಾರದ ವಹಿವಾಟಿನಲ್ಲಿ ನಿಫ್ಟಿ 104 ಅಂಶ ಇಳಿಕೆ ಕಂಡಿತು. ನೆಸ್ಲೆ ಇಂಡಿಯಾ ಕಂಪನಿಯ ಷೇರು ಮೌಲ್ಯ ಶೇಕಡ 2.80ರಷ್ಟು ಇಳಿಕೆಯಾಯಿತು. ಬಜಾಜ್ ಫಿನ್‌ಸರ್ವ್‌, ಏಷ್ಯನ್‌ ಪೇಂಟ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್‌, ಇಂಡಸ್‌ ಇಂಡ್‌ ಬ್ಯಾಂಕ್, ಮಾರುತಿ, ಡಾ ರೆಡ್ಡೀಸ್ ಮತ್ತು ಎಚ್‌ಡಿಎಫ್‌ಸಿ ಷೇರು ಮೌಲ್ಯ ಕುಸಿಯಿತು.

ಎಸ್‌ಬಿಐ, ಪವರ್‌ಗ್ರಿಡ್‌, ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಆಟೊ ಷೇರುಗಳು ಏರಿಕೆ ಕಂಡವು.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 0.58ರಷ್ಟು ಹೆಚ್ಚಳವಾಗಿದ್ದು, ಪ್ರತಿ ಬ್ಯಾರೆಲ್‌ಗೆ 63.71 ಅಮೆರಿಕನ್ ಡಾಲರ್‌ಗೆ ತಲುಪಿದೆ. ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ₹ 72.74ಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.