ADVERTISEMENT

ಷೇರುಪೇಟೆ ಚೇತರಿಕೆ

ಪಿಟಿಐ
Published 11 ಫೆಬ್ರುವರಿ 2020, 17:21 IST
Last Updated 11 ಫೆಬ್ರುವರಿ 2020, 17:21 IST

ಮುಂಬೈ: ದೇಶದ ಷೇರುಪೇಟೆಗಳ ಎರಡು ದಿನಗಳ ನಕಾರಾತ್ಮಕ ಚಲನೆಗೆ ತಡೆ ಬಿದ್ದಿದೆ. ಚೀನಾದ ಕೊರೊನಾ ವೈರಸ್‌ ಪ್ರಭಾವ ಕಡಿಮೆ ಆಗಿರುವುದರಿಂದ ಮಂಗಳವಾರ ಸೂಚ್ಯಂಕಗಳು ಏರಿಕೆ ಹಾದಿಗೆ ಮರಳಿದವು.

ಮುಂಬೈ ಷೇರುಪೇಟೆ ಸೂಚ್ಯಂಕ 237 ಅಂಶ ಚೇತರಿಕೆ ಕಂಡು 41,216 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 76 ಅಂಶ ಹೆಚ್ಚಾಗಿ 12,107 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಎನ್‌ಟಿಪಿಸಿ, ಮಾರುತಿ, ಎಸ್‌ಬಿಐ, ಪವರ್‌ಗ್ರಿಡ್‌, ಬಜಾಜ್‌ ಆಟೊ, ಅಲ್ಟ್ರಾಟೆಕ್‌ ಸಿಮೆಂಟ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್ ಷೇರುಗಳು
ಶೇ 2.95ರವರೆಗೂ ಏರಿಕೆ ಕಂಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.