ADVERTISEMENT

ಭಾರತದಲ್ಲಿ ವಹಿವಾಟು ನಿಲ್ಲಿಸಿದ ಸಿಂಗಪುರ ಮೂಲದ ಇ–ಕಾಮರ್ಸ್ ಶಾಪೀ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 15:41 IST
Last Updated 28 ಮಾರ್ಚ್ 2022, 15:41 IST
   

ನವದೆಹಲಿ: ಆನ್‌ಲೈನ್‌ ವೇದಿಕೆ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ಶಾಪೀ ಕಂಪನಿಯು ಭಾರತದಲ್ಲಿನ ವಹಿವಾಟುಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಸೋಮವಾರ ಪ್ರಕಟಿಸಿದೆ.

ಸಿಂಗಪುರ ಮೂಲದ ಸೀ ಲಿಮಿಟೆಡ್ ಮಾಲೀಕತ್ವದ ಈ ಕಂಪನಿಯು ಫೆಬ್ರುವರಿಯಲ್ಲಿ ಫ್ರಾನ್ಸ್‌ನಲ್ಲಿನ ತನ್ನ ವಹಿವಾಟು ಸ್ಥಗಿತಗೊಳಿಸಿತ್ತು. ‘ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ಕಾರಣದಿಂದಾಗಿ ನಾವು ಭಾರತದಲ್ಲಿನ ವಹಿವಾಟು ಸ್ಥಗಿತಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಸೀ ಲಿಮಿಟೆಡ್‌ ಕಂಪನಿಯನ್ನು ಚೀನಾ ಮೂಲದ ಟೆನ್ಸೆಂಟ್ ನಿಯಂತ್ರಿಸುತ್ತಿದೆ ಎಂದು ಸರ್ಕಾರೇತರ ಸಂಘಟನೆ ಪ್ರಹಾರ್ ಆರೋಪಿಸಿತ್ತು.

ADVERTISEMENT

ವರ್ತಕರ ಸಂಘಟನೆಯಾದ ಸಿಎಐಟಿ, ಶಾಪೀ ವ್ಯವಹಾರ ನಿಲ್ಲಿಸಬೇಕು ಎಂದು ಆಗ್ರಹಿಸಿತ್ತು. ಟೆನ್ಸೆಂಟ್ ಕಂಪನಿಯು ಸೀ ಹೋಲ್ಡಿಂಗ್ಸ್‌ನಲ್ಲಿ ಶೇ 25ರಷ್ಟು ಷೇರು ಹೊಂದಿದೆ. ಅದು ಭಾರತದಲ್ಲಿ ಮಾಡಿರುವ ಹೂಡಿಕೆಯು ಎಫ್‌ಡಿಐ ನಿಯಮಗಳಿಗೆ ವಿರುದ್ಧ ಎಂದು ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.