ADVERTISEMENT

ಐಪಿಒದಿಂದ ಹಿಂದೆ ಸರಿದ ಸ್ನ್ಯಾಪ್‌ಡೀಲ್‌

ಪಿಟಿಐ
Published 9 ಡಿಸೆಂಬರ್ 2022, 15:39 IST
Last Updated 9 ಡಿಸೆಂಬರ್ 2022, 15:39 IST

ನವದೆಹಲಿ: ಸಾಫ್ಟ್‌ಬ್ಯಾಂಕ್‌ ಒಡೆತನದ ಇ–ಕಾಮರ್ಸ್‌ ಕಂಪನಿ ಸ್ನ್ಯಾಪ್‌ಡೀಲ್‌ ತನ್ನ ₹ 1,250 ಕೋಟಿ ಮೊತ್ತದ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಕೈಬಿಟ್ಟಿರುವುದಾಗಿ ಶುಕ್ರವಾರ ಹೇಳಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ವಲಯದ ಷೇರುಗಳು ಮಾರಾಟದ ಒತ್ತಡದಲ್ಲಿ ಇರುವ ಬೆನ್ನಲ್ಲೇ, ಸ್ನ್ಯಾಪ್‌ಡೀಲ್‌ ಕಂಪನಿಯು ಐಪಿಒ ಕುರಿತಾದ ಕರಡು ದಾಖಲೆಪತ್ರಗಳನ್ನು (ಡಿಆರ್‌ಎಚ್‌ಪಿ) ಹಿಂದಕ್ಕೆ ಪಡೆಯಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಮನವಿ ಸಲ್ಲಿಸಿದೆ.

ಸದ್ಯದ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಡಿಆರ್‌ಎಚ್‌ಪಿ ಹಿಂದಕ್ಕೆ ಪಡೆಯಲು ಕಂಪನಿ ನಿರ್ಧರಿಸಿದೆ. ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಬಂಡವಾಳದ ಬೆಳವಣಿಗೆಯ ಅಗತ್ಯದ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಐಪಿಒಗೆ ಬರುವ ಬಗ್ಗೆ ಕಂಪನಿ ಪರಿಶೀಲಿಸಲಿದೆ ಎಂದು ಸ್ನ್ಯಾಪ್‌ಡೀಲ್‌ ವಕ್ತಾರರೊಬ್ಬರು ತಿಳಿಸಿದ್ದಾರೆ. ಕಂಪನಿಯು 2021ರ ಡಿಸೆಂಬರ್‌ನಲ್ಲಿ ಸೆಬಿಗೆ ದಾಖಲೆಪತ್ರ ಸಲ್ಲಿಸಿತ್ತು.

ADVERTISEMENT

ಬೋಟ್‌, ಫಾರ್ಮ್‌ಈಸಿ ಮತ್ತು ಡ್ರೂಮ್‌ ಕಂಪನಿಗಳು ಐಪಿಒ ನಡೆಸುವ ತಮ್ಮ ಯೋಜನೆಯನ್ನು ಈಗಾಗಲೇ ಕೈಬಿಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.