ADVERTISEMENT

₹ 2,995ಕ್ಕೆ ಸೊನಾಟಾ ಸ್ಮಾರ್ಟ್‌ವಾಚ್‌; 1 ವರ್ಷ ಬ್ಯಾಟರಿ ಬಾಳಿಕೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 3:10 IST
Last Updated 16 ನವೆಂಬರ್ 2019, 3:10 IST
ಸೊನಾಟಾ ಸ್ಮಾರ್ಟ್‌ ವಾಚ್‌
ಸೊನಾಟಾ ಸ್ಮಾರ್ಟ್‌ ವಾಚ್‌   

ಬೆಂಗಳೂರು: ಟೈಟನ್‌ ಸಮೂಹದ ಕೈಗಡಿಯಾರದ ಜನಪ್ರಿಯ ಬ್ರ್ಯಾಂಡ್‌ ಆಗಿರುವ ಸೊನಾಟಾ, ಹೈಬ್ರಿಡ್‌ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಧರಿಸಬಹುದಾದ ದುಬಾರಿ ದರದ ಬ್ಯಾಂಡ್‌ ಮತ್ತು ಸ್ಮಾರ್ಟ್‌ವಾಚ್‌ಗಳಲ್ಲಿ ಲಭ್ಯವಿದ್ದ ಸೌಲಭ್ಯಗಳನ್ನು ಒಂದೆಡೆಯೇ ಕಡಿಮೆ ಬೆಲೆಗೆ ಒದಗಿಸಿರುವುದು ಹೈಬ್ರಿಡ್‌ ಸ್ಮಾರ್ಟ್‌ವಾಚ್ ‘ಸ್ಟ್ರೈಡ್‌’ನ ವಿಶೇಷತೆಗಳಾಗಿವೆ’ ಎಂದು ಕಂಪನಿಯ ಮಾರುಕಟ್ಟೆ ಮುಖ್ಯಸ್ಥ ಉತ್ಕರ್ಷ ಥಾಕೂರ್ ಹೇಳಿದ್ದಾರೆ.

ಬಳಕೆದಾರರ ನಡಿಗೆ, ಕ್ಯಾಲೊರಿ ನಷ್ಟ, ಗುಣಮಟ್ಟದ ನಿದ್ರೆ ಕುರಿತು ಮಾಹಿತಿ ನೀಡುವ ಬ್ಯಾಂಡ್‌ ಮತ್ತು ಅನಲಾಗ್‌ ಕೈಗಡಿಯಾರಗಳ ವಿಶಿಷ್ಟ ಹೈಬ್ರಿಡ್‌ ಉತ್ಪನ್ನ ಇದಾಗಿದೆ. ಇದಕ್ಕೆ ಪೂರಕವಾಗಿ ಸ್ಟ್ರೈಡ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಒಂದು ವರ್ಷದವರೆಗೆ ಬ್ಯಾಟರಿ ಬಾಳಿಕೆ ಇದರ ಇನ್ನೊಂದು ವೈಶಿಷ್ಟ್ಯವಾಗಿದೆ. ಸ್ಟ್ರೈಡ್‌ ಮತ್ತು ಸ್ಟ್ರೈಡ್‌ ಪ್ರೊ ಮಾದರಿಯಲ್ಲಿ ಲಭ್ಯ ಇದೆ. ದರ ₹2,995ರಿಂದ ಆರಂಭವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.