ADVERTISEMENT

ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಏರಿಕೆ

ಪಿಟಿಐ
Published 11 ಜೂನ್ 2025, 16:14 IST
Last Updated 11 ಜೂನ್ 2025, 16:14 IST
ಸೆನ್ಸೆಕ್ಸ್‌
ಸೆನ್ಸೆಕ್ಸ್‌   

ಮುಂಬೈ: ದೇಶದ ಷೇರು ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 123 ಅಂಶ ಹೆಚ್ಚಳವಾಗಿ, 82,515ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 37 ಅಂಶ ಏರಿಕೆಯಾಗಿ, 25,141ಕ್ಕೆ ಕೊನೆಗೊಂಡಿದೆ.

ಎಚ್‌ಸಿಎಲ್‌ ಟೆಕ್‌, ಇನ್ಫೊಸಿಸ್, ಟೆಕ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್‌, ಐಸಿಐಸಿಐ ಬ್ಯಾಂಕ್, ಟಾಟಾ ಮೋಟರ್ಸ್‌ ಮತ್ತು ಎಟರ್ನಲ್‌ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. 

ADVERTISEMENT

ಪವರ್‌ ಗ್ರಿಡ್, ಅದಾನಿ ಪೋರ್ಟ್ಸ್, ಇಂಡಸ್‌ಇಂಡ್ ಬ್ಯಾಂಕ್, ನೆಸ್ಲೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಹಿಂದೂಸ್ತಾನ್ ಯುನಿಲಿವರ್ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.