ನವದೆಹಲಿ: ಟಾಟಾ ಸನ್ಸ್‌ನ ಅಂಗಸಂಸ್ಥೆಯಾಗಿರುವ ಟಾಟಾ ಡಿಜಿಟಲ್ ಲಿಮಿಟೆಡ್ ಕಂಪನಿಯು ‘1ಎಂಜಿ ಟೆಕ್ನಾಲಜೀಸ್ ಲಿಮಿಟೆಡ್’ ಕಂಪನಿಯಲ್ಲಿನ ಬಹುಪಾಲು ಷೇರುಗಳನ್ನು ಖರೀದಿಸುವುದಾಗಿ ಹೇಳಿದೆ. ‘1ಎಂಜಿ’ ಕಂಪನಿಯು ಆರೋಗ್ಯಸೇವಾ ಪರಿಕರಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುತ್ತದೆ.
ಖರೀದಿಯ ಮೊತ್ತ ಎಷ್ಟು ಎಂಬುದನ್ನು ಟಾಟಾ ಬಹಿರಂಗಪಡಿಸಿಲ್ಲ. ಕ್ಯೂರ್‌ಫಿಟ್ ಹೆಲ್ತ್‌ಕೇರ್ ಕಂಪನಿಯಲ್ಲಿ ₹ 550 ಕೋಟಿ ಹೂಡಿಕೆ ಮಾಡುವುದಾಗಿ ಟಾಟಾ ಡಿಜಿಟಲ್ ಕೆಲವು ದಿನಗಳ ಹಿಂದೆ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.