ADVERTISEMENT

ಟಾಟಾ ಹ್ಯಾರಿಯರ್‌ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 17:50 IST
Last Updated 24 ಜನವರಿ 2019, 17:50 IST
ಟಾಟಾ ಮೋಟರ್ಸ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ರಾಜೇಂದ್ರ ಪೇಟ್ಕರ್ ಮತ್ತು ಪ್ರಯಾಣಿಕ ವಾಹನ ತಯಾರಿಕಾ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವತ್ಸ ಅವರು ಬೆಂಗಳೂರಿನಲ್ಲಿ ಟಾಟಾ ಹ್ಯಾರಿಯರ್‌ ಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು  ಪಿಟಿಐ ಚಿತ್ರ
ಟಾಟಾ ಮೋಟರ್ಸ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ರಾಜೇಂದ್ರ ಪೇಟ್ಕರ್ ಮತ್ತು ಪ್ರಯಾಣಿಕ ವಾಹನ ತಯಾರಿಕಾ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವತ್ಸ ಅವರು ಬೆಂಗಳೂರಿನಲ್ಲಿ ಟಾಟಾ ಹ್ಯಾರಿಯರ್‌ ಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು  ಪಿಟಿಐ ಚಿತ್ರ   

ಬೆಂಗಳೂರು: ಟಾಟಾ ಮೋಟಾರ್ಸ್‌, 2018ರ ಆಟೊ ಎಕ್ಸ್‌ಪೊದಲ್ಲಿ ಪ್ರದರ್ಶಿಸಿದ್ದ ಹ್ಯಾರಿಯರ್ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಅನ್ನು ರಾಜ್ಯದಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಈ ವಾಹನವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಎಲ್ಲ ರೀತಿಯ ತಾಪಮಾನಗಳಿಗೆ ಹೊಂದಿಕೊಳ್ಳುವಂತೆ ಇದೆ. ಕಲ್ಲು–ಮಣ್ಣಿನ ರಸ್ತೆಗಳಲ್ಲೂ ಆರಾಮವಾಗಿಚಾಲನೆ ಮಾಡಲು ಅನುಕೂಲ ಆಗುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ರಾಜೇಂದ್ರ ಪೇಟ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಎಂಜಿನ್ ಮತ್ತು ತಯಾರಿಕಾ ಗುಣಮಟ್ಟ ಸೇರಿದಂತೆ ಹಲವು ವಿಧದಲ್ಲಿ ಸುಧಾರಿತ ತಂತ್ರಜ್ಞಾನ ಒಳಗೊಂಡಿದ್ದು ದೇಶಿ ಮಾರುಕಟ್ಟೆಯಲ್ಲಿ ಈ ವಾಹನ ಹೊಸ ಛಾಪು ಮೂಡಿಸುವ ನಿರೀಕ್ಷೆ ಇದೆ’ ಎಂದರು.

ADVERTISEMENT

‘ಮಧ್ಯಮ ಗಾತ್ರದ ಐದು ಆಸನಗಳ ಎಸ್‌ಯುವಿ ವಿಭಾಗದಲ್ಲಿ ಈ ವಾಹನ ಹೊಸ ಬ್ರ್ಯಾಂಡ್‌ ಮೌಲ್ಯ ಸೃಷ್ಟಿಸಲಿದೆ’ ಎಂದು ಸಂಸ್ಥೆಯ ಪ್ರಯಾಣಿಕ ವಾಹನ ತಯಾರಿಕಾ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀ ವತ್ಸ ತಿಳಿಸಿದರು.

ಬೆಂಗಳೂರಿನಲ್ಲಿ ಇದರ ಎಕ್ಸ್–ಷೋರೂಂ ಬೆಲೆ ₹ 12.69 ಲಕ್ಷದಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.