ADVERTISEMENT

ಪಟ್ಟಣ ಸಹಕಾರಿ ಬ್ಯಾಂಕ್‌: ಆರ್‌ಬಿಐ ಸಮಿತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 20:56 IST
Last Updated 24 ಫೆಬ್ರುವರಿ 2021, 20:56 IST

ಬೆಂಗಳೂರು: ಪ್ರಾಥಮಿಕ ಪಟ್ಟಣ ಸಹಕಾರಿ ಬ್ಯಾಂಕ್‌ಗಳನ್ನು (ಯುಸಿಬಿ) ಇನ್ನಷ್ಟು ಬಲಪಡಿಸಲು ಮಾಡಬೇಕಿರುವ ಕಾರ್ಯಗಳೇನು ಎಂಬುದರ ಬಗ್ಗೆ ವರದಿ ಸಿದ್ಧಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸಮಿತಿಯೊಂದನ್ನು ರಚಿಸಿದೆ.

ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್ ಎನ್.ಎಸ್. ವಿಶ್ವನಾಥನ್ ಅವರು ಈ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ಮೂರು ತಿಂಗಳುಗಳಲ್ಲಿ ಇದು ತನ್ನ ವರದಿಯನ್ನು ಆರ್‌ಬಿಐಗೆ ಸಲ್ಲಿಸಬೇಕಿದೆ. ಒಟ್ಟು ಎಂಟು ಜನರ ಸಮಿತಿ ಇದು.

ಬೆಂಗಳೂರಿನ ಆಡಳಿತ ನಿರ್ವಹಣಾ ಸಂಸ್ಥೆಯ (ಐಐಎಂ–ಬಿ) ಪ್ರೊ.ಎಂ.ಎಸ್. ಶ್ರೀರಾಮ್, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಎನ್‌.ಸಿ. ಮುನಿಯಪ್ಪ, ಆರ್.ಎನ್. ಜೋಷಿ, ನಬಾರ್ಡ್‌ನ ಮಾಜಿ ಅಧ್ಯಕ್ಷ ಹರೀಶ್ ಕುಮಾರ್ ಭನ್ವಾಲಾ, ಲೆಕ್ಕಪರಿಶೋಧಕ ಮುಕುಂದ ಎಂ. ಚಿತಲೆ, ಪಟ್ಟಣ ಸಹಕಾರಿ ಬ್ಯಾಂಕ್‌ಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಜ್ಯೋತೀಂದ್ರ ಮೆಹ್ತಾ ಅವರು ಈ ಸಮಿತಿಯ ಸದಸ್ಯರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.