ADVERTISEMENT

ಹಸಿರು ಹೈಡ್ರೋಜನ್‌ ಉತ್ಪಾದನೆಗೆ ಒತ್ತು: ಜೋಶಿ

ಪಿಟಿಐ
Published 4 ಜನವರಿ 2025, 15:45 IST
Last Updated 4 ಜನವರಿ 2025, 15:45 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಖಾಂಡ್ವಾ (ಪಿಟಿಐ): ‘ಹಸಿರು ಹೈಡ್ರೋಜನ್‌ ಇಂಧನ ಉತ್ಪಾದನೆಯಲ್ಲಿ ಭಾರತವು ವಿಶ್ವದ ಇತರೆ ರಾಷ್ಟ್ರಗಳಿಗಿಂತ ಮುಂದಿದೆ’ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರ ಜಲಾಶಯದಲ್ಲಿ ಅಳವಡಿಸಿರುವ ತೇಲುವ ಸೌರ ಶಕ್ತಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸಮುದ್ರದಲ್ಲಿ ಬೀಸುವ ಗಾಳಿಯ ಬಲದಿಂದ ಪವನ ಶಕ್ತಿ ಉತ್ಪಾದನೆ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಸಮುದ್ರದಲ್ಲಿ ಗಾಳಿ ಯಂತ್ರಗಳ ಅಳವಡಿಕೆ ಎಂಬುದು ಇದರರ್ಥ. ಇದಕ್ಕಾಗಿ ಬಂದರುಗಳು ಮತ್ತು ವಿದ್ಯುತ್‌ ಪ್ರಸರಣ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕಿದೆ’ ಎಂದರು.

ADVERTISEMENT

ಭೂಶಾಖ ಶಕ್ತಿ ಸ್ಥಾವರಗಳಿಂದ ಶಕ್ತಿ ಪಡೆಯುವ ಬಗ್ಗೆ (ಜಿಯೊಥರ್ಮಲ್‌) ಚಿಂತನೆ ನಡೆದಿದೆ. ಇದು ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಹೇಳಿದರು.

ಭಾರತವು ಸೌರಶಕ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ನವೀಕರಿಸಬಹುದಾದ ಇಂಧನ ಉತ್ಪಾದನಾ ವಲಯದಲ್ಲಿಯೂ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.