ADVERTISEMENT

ಟೆಸ್ಲಾದಿಂದ ಚಾಲಕರಹಿತ ಕಾರು | ರೋಬೊ ಟ್ಯಾಕ್ಸಿ ಅನಾವರಣ

ರಾಯಿಟರ್ಸ್
Published 12 ಅಕ್ಟೋಬರ್ 2024, 13:51 IST
Last Updated 12 ಅಕ್ಟೋಬರ್ 2024, 13:51 IST
ಮಸ್ಕ್‌
ಮಸ್ಕ್‌   

ಲಾಸ್‌ ಏಂಜಲೀಸ್‌ (ರಾಯಿಟರ್ಸ್‌): ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾ ಅಭಿವೃದ್ಧಿಪಡಿಸಿರುವ ಚಾಲಕರಹಿತ ರೋಬೊ ಟ್ಯಾಕ್ಸಿಯನ್ನು ಅನಾವರಣ ಮಾಡಲಾಗಿದೆ.

ಹಾಲಿವುಡ್‌ ಸ್ಟುಡಿಯೊದಲ್ಲಿ ಟ್ಯಾಕ್ಸಿ ಅನಾವರಣದ ಬಳಿಕ ಮಾತನಾಡಿದ ಟೆಸ್ಲಾ ಮುಖ್ಯಸ್ಥ ಇಲಾನ್‌ ಮಸ್ಕ್‌, ‘2026ರಿಂದ ಕಂಪನಿಯು ರೋಬೊ ಟ್ಯಾಕ್ಸಿಗಳ ತಯಾರಿಕೆ ಆರಂಭಿಸಲಿದೆ. ಇದರ ಬೆಲೆ 30 ಸಾವಿರ ಡಾಲರ್‌ಗಿಂತ (₹25 ಲಕ್ಷ) ಕಡಿಮೆ ಇರಲಿದೆ’ ಎಂದು ತಿಳಿಸಿದ್ದಾರೆ.

ಮುಂದಿನ ವರ್ಷದ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‌ನಲ್ಲಿ ಕಂಪನಿಯ ಜನಪ್ರಿಯ ಕಾರುಗಳಾದ ಮಾಡೆಲ್‌ 3 ಮತ್ತು ಮಾಡೆಲ್‌ ವೈ ಅನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ರೋಬೊ ಟ್ಯಾಕ್ಸಿಯ ಸ್ವಯಂಚಾಲಿತ ವ್ಯವಸ್ಥೆಗೆ ‘ಆಟೊಪೈಲಟ್‌’ ಎಂದು ಕರೆಯಲಾಗುತ್ತದೆ. ಈ ತಂತ್ರಜ್ಞಾನ ಹೊಂದಿರುವ ಕಾರುಗಳನ್ನು ಸಮೂಹ ಸಾರಿಗೆ ವ್ಯವಸ್ಥೆಯಾಗಿ ಜನಪ್ರಿಯಗೊಳಿಸುವುದು ಮಸ್ಕ್‌ ಅವರ ಗುರಿಯಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.