ADVERTISEMENT

ಇಪಿಎಫ್‌ಒ: ಇಟಿಎಫ್‌ ಹೂಡಿಕೆ ₹ 1.59 ಲಕ್ಷ ಕೋಟಿ

ಪಿಟಿಐ
Published 8 ಆಗಸ್ಟ್ 2022, 13:11 IST
Last Updated 8 ಆಗಸ್ಟ್ 2022, 13:11 IST

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಒಟ್ಟು ₹ 1.59 ಲಕ್ಷ ಕೋಟಿ ತೊಡಗಿಸಿದ್ದು, ಅದರ ಮೌಲ್ಯವು ₹ 2.26 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಸೋಮವಾರ ತಿಳಿಸಿದೆ.

ಮಾರ್ಚ್‌ವರೆಗಿನ ಮಾಹಿತಿ ಆಧರಿಸಿ ಕೇಂದ್ರ ಈ ವಿವರ ನೀಡಿದೆ. ಇಪಿಎಫ್‌ಒ 2015ರಿಂದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುತ್ತಿದೆ. ಆರಂಭದಲ್ಲಿ ಅದು ತನ್ನ ಒಟ್ಟು ಹೂಡಿಕೆಗಳಲ್ಲಿ ಶೇಕಡ 5ರಷ್ಟನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿತು. ನಂತರದ ದಿನಗಳಲ್ಲಿ ಅದನ್ನು ಶೇ 10ಕ್ಕೆ ಹೆಚ್ಚಿಸಲಾಯಿತು. 2017–18ರಿಂದ ಶೇ 15ರಷ್ಟು ಮೊತ್ತವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT