ADVERTISEMENT

ವೆಲ್ನಿಕ್‌ ಇಂಡಿಯಾದಿಂದ 'ನ್ಯೂಟ್ರಿಗೇನ್‌ ಪ್ಲಸ್‌' ಹೊಸ ಉತ್ಪನ್ನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಮೇ 2023, 13:03 IST
Last Updated 10 ಮೇ 2023, 13:03 IST
ನ್ಯೂಟ್ರಿಗೇನ್‌
ನ್ಯೂಟ್ರಿಗೇನ್‌   

ಬೆಂಗಳೂರು: ವೆಲ್ನಿಕ್‌ ಇಂಡಿಯಾ ಲಿಮಿಟೆಡ್ ಕಂಪನಿಯು ದೇಶದ ಮಾರುಕಟ್ಟೆಗೆ ‘ನ್ಯೂಟ್ರಿಗೇನ್‌ ಪ್ಲಸ್‌’ ಎನ್ನುವ ಹೊಸ ಉತ್ಪನ್ನ ಬಿಡುಗಡೆ ಮಾಡಿದೆ. ತೂಕ ಹೆಚ್ಚಿಸಿಕೊಳ್ಳುವ ಆಯುರ್ವೇದಿಕ್‌ ಪೌಡರ್ ಇದು ಎಂದು ಕಂಪನಿ ಹೇಳಿದೆ.

29 ಬಗೆಯ ವಿಟಮಿನ್‌ ಮತ್ತು ಮಿನರಲ್‌ಗಳ ಜೊತೆಗೆ ಅಶ್ವಗಂಧ, ಶತಾವರಿ ಸೇರಿದಂತೆ 6 ಗಿಡಮೂಲಿಕೆಗಳನ್ನು ಸಹ ಇದು ಒಳಗೊಂಡಿದೆ. ಈ ಉತ್ಪನ್ನಕ್ಕೆ ಯಾವುದೇ ಕೃತಕ ಬಣ್ಣ ಮತ್ತು ಪರಿಮಳವನ್ನು ಸೇರಿಸಿಲ್ಲ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ನಮ್ಮ ಗ್ರಾಹಕರಿಗೆ ನ್ಯೂಟ್ರಿಗೇನ್‌ ಪ್ಲಸ್‌ ಪರಿಚಯಿಸಲು ಸಂತೋಷ ಆಗುತ್ತಿದೆ. ಈ ಉತ್ಪನ್ನ ಹೊರತರಲು ನಾವು ಬಹಳ ದೀರ್ಘ ಸಮಯದಿಂದ ಕೆಲಸ ಮಾಡುತ್ತಿದ್ದೆವು. ಆಯುರ್ವೇದಿಕ್‌ ನ್ಯೂಟ್ರಾಸುಟಿಕಲ್‌ (ಆರೋಗ್ಯವರ್ಧಕ ಆಹಾರ ವಸ್ತುಗಳು) ಮಾರುಕಟ್ಟೆಯಲ್ಲಿ ಪರಿವರ್ತನೆಗೆ ಇದು ಕಾರಣವಾಗುವ ವಿಶ್ವಾಸವಿದೆ’ ಎಂದು ವೆಲ್ನಿಕ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುಖದೇವ್‌ ಗೆಹ್ಲೋಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.