ಬೆಂಗಳೂರು: ಯೂರೋಪ್ನ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಫೋಕ್ಸ್ವ್ಯಾಗನ್ ಗ್ರಾಹಕ ಸೇವೆ ವಿಸ್ತರಿಸಲು ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಮತ್ತು ತುಮಕೂರಿನಲ್ಲಿ ಕ್ರಮವಾಗಿ ಸಿಟಿ ಸ್ಟೋರ್ ಮತ್ತು ಪಾಪ್ ಅಪ್ ಸ್ಟೋರ್ ಹೆಸರಿನ ಷೋರೂಂಗಳನ್ನು ಆರಂಭಿಸಿದೆ.
ಸೇವೆಯಲ್ಲಿ ಹೊಸತನ ಒದಗಿಸಲು ಈ ಷೋರೂಂಗಳನ್ನು ಆರಂಭಿಸಲಾಗಿದೆ. ಗ್ರಾಹಕರು ತಮ್ಮ ಮೆಚ್ಚಿನ ಕಾರು ಖರೀದಿಸುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅದನ್ನು ಭೌತಿಕವಾಗಿ ನೋಡಿ ಖರೀದಿಸುವ ತೀರ್ಮಾನಕ್ಕೆ ಬರುವ ಅವಕಾಶವನ್ನು ಈ ಷೋರೂಂಗಳ ಮೂಲಕ ಒದಗಿಸಲಾಗಿದೆ. ಈ ಷೋರೂಂಗಳು ಕಾರ್ ಖರೀದಿ ಪ್ರಕ್ರಿಯೆ ಸುಲಭಗೊಳಿಸಲಿವೆ ಎಂದು ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.