ADVERTISEMENT

ವಿಮಾನ ಇಂಧನ: ಆಕಸ್ಮಿಕ ಲಾಭ ತೆರಿಗೆ ಇಳಿಕೆ

ಪಿಟಿಐ
Published 4 ಮಾರ್ಚ್ 2023, 16:22 IST
Last Updated 4 ಮಾರ್ಚ್ 2023, 16:22 IST
   

ನವದೆಹಲಿ: ಕೇಂದ್ರ ಸರ್ಕಾರವು ಡೀಸೆಲ್‌ ಮತ್ತು ವಿಮಾನ ಇಂಧನ (ಎಟಿಎಫ್‌) ರಫ್ತು ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಕಡಿಮೆ ಮಾಡಿದೆ. ಇದೇ ವೇಳೆ ದೇಶದಲ್ಲಿ ತಯಾರಾಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ತುಸು ಹೆಚ್ಚಳ ಮಾಡಿದೆ.

ದೇಶದಲ್ಲಿ ತಯಾರಾಗುವ ಕಚ್ಚಾ ತೈಲದ ಮೇಲಿನ ತೆರಿಗೆ ಪ್ರತಿ ಟನ್‌ಗೆ ₹4,300 ರಿಂದ ₹4,400ಕ್ಕೆ ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಡೀಸೆಲ್‌ ರಫ್ತು ತೆರಿಗೆ ಲೀಟರಿಗೆ 50 ಪೈಸೆ ಕಡಿಮೆ ಮಾಡಲಾಗಿದೆ. ಹೊಸ ತೆರಿಗೆಯು ₹2ಕ್ಕೆ ತಗ್ಗಿದೆ. ಎಟಿಎಫ್‌ ಮೇಲಿನ ತೆರಿಗೆ ₹1.50 ರಿಂದ ಶೂನ್ಯಕ್ಕೆ ತಗ್ಗಿಸಲಾಗಿದೆ. ಹೊಸ ತೆರಿಗೆ ದರಗಳು ಶನಿವಾರದಿಂದಲೇ ಜಾರಿಗೆ ಬರಲಿವೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.