ADVERTISEMENT

₹ 857 ಕೋಟಿಗೆ ಆ್ಯಂಪಿಯಾನ್ ಕಂಪನಿಯನ್ನು ಖರೀದಿಸಲಿದೆ ವಿಪ್ರೊ

ಪಿಟಿಐ
Published 1 ಏಪ್ರಿಲ್ 2021, 14:15 IST
Last Updated 1 ಏಪ್ರಿಲ್ 2021, 14:15 IST
ಪ್ರಾತಿನಿಧಿಕ ಚಿತ್ರ (ರಾಯಿಟರ್ಸ್‌)
ಪ್ರಾತಿನಿಧಿಕ ಚಿತ್ರ (ರಾಯಿಟರ್ಸ್‌)   

ನವದೆಹಲಿ: ಆಸ್ಟ್ರೇಲಿಯಾ ಮೂಲದ ಸೈಬರ್ ಭದ್ರತಾ ಸೇವಾ ಕಂಪನಿ ಆ್ಯಂಪಿಯಾನ್, ಬೆಂಗಳೂರಿನ ವಿಪ್ರೊ ಕಂಪನಿಯ ತೆಕ್ಕೆಗೆ ಜಾರಲಿದೆ. ಅಂದಾಜು ₹ 857 ಕೋಟಿ ಪಾವತಿಸಿ ಆ್ಯಂಪಿಯಾನ್ ಕಂಪನಿಯನ್ನು ಖರೀದಿಸುತ್ತಿರುವುದಾಗಿ ವಿಪ್ರೊ ತಿಳಿಸಿದೆ.

ಆ್ಯಂಪಿಯಾನ್‌ ಕಂಪನಿಯು ಮೆಲ್ಬರ್ನ್‌ನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು ಸಿಡ್ನಿ, ಬ್ರಿಸ್ಬೇನ್ ಮತ್ತು ಕ್ಯಾನ್‌ಬೆರಾದಲ್ಲಿ ಕಚೇರಿಗಳನ್ನು ಹೊಂದಿದೆ. ವಿಪ್ರೊ ಕಂಪನಿಯು ಲಂಡನ್‌ ಮೂಲದ ಕ್ಯಾಪ್ಕೊ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಘೋಷಣೆಯನ್ನು ಮಾರ್ಚ್‌ ತಿಂಗಳಲ್ಲಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT