ADVERTISEMENT

WTO Meet | ನಾಳೆಯಿಂದ ಅಬುದಾಬಿಯಲ್ಲಿ ಸಚಿವರ ಸಭೆ

ಪಿಟಿಐ
Published 25 ಫೆಬ್ರುವರಿ 2024, 14:43 IST
Last Updated 25 ಫೆಬ್ರುವರಿ 2024, 14:43 IST
   

ನವದೆಹಲಿ: ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) 13ನೇ ಸಚಿವರ ಸಭೆ ಯುನೈಟೆಡ್ ಅರಬ್‌ ಎಮಿರೇಟ್ಸ್‌ನ (ಯುಎಇ) ಅಬುಧಾಬಿಯಲ್ಲಿ ಫೆಬ್ರುವರಿ 26ರಿಂದ ಆರಂಭವಾಗಲಿದೆ. ಭಾರತೀಯ ನಿಯೋಗವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೇತೃತ್ವ ವಹಿಸಲಿದ್ದಾರೆ.

ಚೀನಾ ಮುಂದಿಟ್ಟಿರುವ ಹೂಡಿಕೆ ಉತ್ತೇಜನ ಒಪ್ಪಂದ ಪ್ರಸ್ತಾವವನ್ನು ಭಾರತವು ಸಭೆಯಲ್ಲಿ ವಿರೋಧಿಸಲಿದೆ. ಹಾಗೆಯೇ, ಆಹಾರ ಭದ್ರತೆಗಾಗಿ ಸರ್ಕಾರವು ಧಾನ್ಯ ಸಂಗ್ರಹಿಸಿ  ಇರಿಸುವ ವಿಚಾರ ಹಾಗೂ ಮೀನುಗಾರರ ಹಿತರಕ್ಷಣೆಯಂತಹ ವಿಚಾರಗಳಿಗೆ ಕಾಯಂ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತವು ಒತ್ತಾಯಿಸಲಿದೆ. ‌

ಸಭೆಯಲ್ಲಿ ಭಾರತವು, ಆಹಾರ ಭದ್ರತೆ, ಕೃಷಿ ಸುಧಾರಣೆಗಳು, ಮೀನುಗಾರಿಕೆ ಸಬ್ಸಿಡಿಗಳು, ವಿವಾದಗಳ ಇತ್ಯರ್ಥ ಸೇರಿದಂತೆ ವಿವಿಧ ವಿಷಯಗಳಿಗೆ ಕಾಯಂ ಪರಿಹಾರವನ್ನು ಕಂಡು ಹಿಡಿಯವುದರ ಕುರಿತು ಪ್ರಸ್ತಾಪ ಮಾಡಲಿದೆ.

ADVERTISEMENT

ಕೆಂಪು ಸಮುದ್ರ ಬಿಕ್ಕಟ್ಟು, ಉಕ್ರೇನ್‌–ರಷ್ಯಾ ಯುದ್ಧ ಮತ್ತು ಇಸ್ರೇಲ್‌ ಹಮಾಸ್‌ನಲ್ಲಿನ ಸಂಘರ್ಷದಿಂದಾಗಿ ಉಂಟಾಗಿರುವ ಅನಿಶ್ಚಿತ ಜಾಗತಿಕ ಆರ್ಥಿಕ ಪರಿಸ್ಥಿತಿಯ ಹಿನ್ನಲೆಯಲ್ಲಿ ವಿಶ್ವ ವ್ಯಾಪಾರ ಸಂಘಟನೆಯ 164 ಸದಸ್ಯ ರಾಷ್ಟ್ರಗಳ ಸಚಿವರು ಸಭೆ ಸೇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.