ADVERTISEMENT

ಯೆಸ್‌ ಬ್ಯಾಂಕ್‌: ₹ 15 ಸಾವಿರ ಕೋಟಿ ಸಂಗ್ರಹದ ‘ಎಫ್‌ಪಿಒ‘

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 18:21 IST
Last Updated 13 ಜುಲೈ 2020, 18:21 IST
   

ಬೆಂಗಳೂರು: ಖಾಸಗಿ ವಲಯದ ಹೊಸ ತಲೆಮಾರಿನ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಯೆಸ್‌ ಬ್ಯಾಂಕ್‌, ಷೇರುಗಳನ್ನು ಮಾರಾಟ ಮಾಡುವ ಪೂರಕ ಸಾರ್ವಜನಿಕ ನೀಡಿಕೆ (ಎಫ್‌ಪಿಒ) ಮೂಲಕ ₹ 15 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

ಈ ‘ಎಫ್‌ಪಿಒ’ ನೀಡಿಕೆಯು ಇದೇ 15ರಿಂದ ಆರಂಭವಾಗಿ 17ಕ್ಕೆ ಕೊನೆಗೊಳ್ಳಲಿದೆ. ಇದುವರೆಗಿನ ಯಾವುದೇ ಸಂಸ್ಥೆಯ ‘ಎಫ್‌ಪಿಒ’ಗಳಲ್ಲಿಯೇ ಇದು ದೊಡ್ಡ ಮೊತ್ತದ್ದಾಗಿದೆ.

’ಎಫ್‌ಪಿಒ’ ನೀಡಿಕೆಯಲ್ಲಿ ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಶೇ 50, ಸಾಂಸ್ಥಿಕಯೇತರ ಬಿಡ್‌ದಾರರಿಗೆ ಶೇ 15 ಮತ್ತು ಸಾಮಾನ್ಯ ಬಿಡ್‌ದಾರರಿಗೆ ಶೇ 35ರಷ್ಟು ಷೇರುಗಳನ್ನು ಮೀಸಲು ಇರಿಸಲಾಗಿದೆ.

ADVERTISEMENT

‘ಬ್ಯಾಂಕ್‌ನ ಎರಡು ವರ್ಷಗಳ ವಹಿವಾಟು ವಿಸ್ತರಣೆಗೆ ಈ ಮೊತ್ತ ಸಾಕಾಗಲಿದೆ’ ಎಂದು ಬ್ಯಾಂಕ್‌ನ ಸಿಇಒ ಪ್ರಶಾಂತ್ ಕುಮಾರ್‌ ಅವರು ಸೋಮವಾರ ನಡೆದ ವೆಬಿನಾರ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.