ADVERTISEMENT

ಷೇರು ಮಾರುಕಟ್ಟೆ, ರೂಪಾಯಿ ಮೌಲ್ಯ ಕುಸಿತ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 5:17 IST
Last Updated 26 ಫೆಬ್ರುವರಿ 2019, 5:17 IST
   

ಬೆಂಗಳೂರು: ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಪಾಕ್ ಮೇಲೆ ವಾಯುದಾಳಿ ನಡೆಸಿದ ಸುದ್ದಿ ಹರಡುತ್ತಿದ್ದ ಬೆನ್ನಲ್ಲೇ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ರೂಪಾಯಿ ಮೌಲ್ಯವೂ ಕುಸಿದಿದ್ದು ವಹಿವಾಟುದಾರರಲ್ಲಿ ಆತಂಕ ಮೂಡಿದೆ.

ಬೆಳಿಗ್ಗೆ 9 ಗಂಟೆಗೆ ಮಾರುಕಟ್ಟೆ ಆರಂಭವಾಗುವ ಮೊದಲೇ ವೈಮಾನಿಕ ದಾಳಿಯ ಬಗ್ಗೆ ಪ್ರಮುಖ ಜಾಲತಾಣಗಳಲ್ಲಿ ವರದಿ ಪ್ರಕಟವಾಗಿತ್ತು. ರಾಷ್ಟ್ರೀಯ ಸೂಚ್ಯಂಕ(ನಿಫ್ಟಿ)35.60 ಅಂಶಗಳ ಕುಸಿತದೊಂದಿಗೆ (10,844 ಅಂಶ) ದಿನದ ವಹಿವಾಟು ಆರಂಭಿಸಿದರೆ, ಮುಂಬೈ ಷೇರುಪೇಟೆಯು (ಸೆನ್ಸೆಕ್ಸ್) 123.65 ಅಂಶಗಳ ಕುಸಿತದೊಂದಿಗೆ (35,089) ವಹಿವಾಟು ಆರಂಭಿಸಿತು.

ವಹಿವಾಟು ಆರಂಭಗೊಂಡ ಮೊದಲ ಕೆಲ ನಿಮಿಷಗಳಲ್ಲಿಯೇ ನಿಫ್ಟಿ 139.90 (10740) ಮತ್ತು ಸೆನ್ಸೆಕ್ಸ್ 460.18 (35753.20) ಅಂಶಗಳನ್ನು ಕಳೆದುಕೊಂಡಿತು. ಆಟೊಮೊಬೈಲ್, ಬ್ಯಾಂಕಿಂಗ್, ಇಂಧನ, ಗ್ರಾಹಕ ಉಪಯೋಗಿ ವಸ್ತುಗಳು, ಮೂಲಸೌಕರ್ಯ ಕಂಪನಿಗಳು, ಖನಿಜ, ಔಷಧಿ ಸೇರಿದಂತೆ ಬಹುತೇಕ ಎಲ್ಲ ವಲಯದ ಷೇರುಗಳಮೌಲ್ಯವು ಕುಸಿಯುತ್ತಿದೆ.

ADVERTISEMENT

ರೂಪಾಯಿ ಮೌಲ್ಯ ಕುಸಿತ:ಡಾಲರ್ ಎದುರುರೂಪಾಯಿ ಮೌಲ್ಯವು 28 ಪೈಸೆಗಳಷ್ಟು ಕುಸಿತ ಕಂಡಿದೆ. ಡಾಲರ್ ಮೊತ್ತವು ₹71.26 ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.