ADVERTISEMENT

ಷೇರುಪೇಟೆಯಲ್ಲಿ ಮಾರಾಟದ ಒತ್ತಡ

ಬ್ಯಾಂಕಿಂಗ್ ವಲಯದ ಷೇರುಗಳಿಗೆ ಹೆಚ್ಚಿನ ಹಾನಿ

ಪಿಟಿಐ
Published 1 ಅಕ್ಟೋಬರ್ 2019, 20:28 IST
Last Updated 1 ಅಕ್ಟೋಬರ್ 2019, 20:28 IST

ಮುಂಬೈ : ಬ್ಯಾಂಕಿಂಗ್‌ ವಲಯದ ಷೇರುಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದಾಗಿ ಷೇರುಪೇಟೆಗಳ ಸೂಚ್ಯಂಕಗಳು ಮಂಗಳವಾರ ಹೆಚ್ಚಿನ ಹಾನಿ ಅನುಭವಿಸುವಂತಾಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 362 ಅಂಶಗಳಷ್ಟು ಇಳಿಕೆ ಕಂಡು 38,305 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 11,400 ಅಂಶಗಳಿಗಿಂತ ಕೆಳಕ್ಕಿಳಿದಿದೆ.

ADVERTISEMENT

ಯೆಸ್‌ ಬ್ಯಾಂಕ್‌ ಷೇರುಗಳು ಶೇ 24ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಇಂಡಸ್‌ ಇಂಡ್‌ ಬ್ಯಾಂಕ್‌, ಎಸ್‌ಬಿಐ, ಭಾರ್ತಿ ಏರ್‌ಟೆಲ್‌, ಒನ್‌ಜಿಸಿ, ಟಾಟಾ ಸ್ಟೀಲ್‌ ಮತ್ತು ಟಿಸಿಎಸ್ ಷೇರುಗಳಿಗೂ ಹಾನಿಯಾಗಿದೆ.

ಪಂಜಾಬ್‌ ಮತ್ತು ಮಹಾರಾಷ್ಟ್ರ ಕೊ ಆಪರೇಟಿವ್ ಬ್ಯಾಂಕ್‌ (ಪಿಎಂಸಿ) ಬಿಕ್ಕಟ್ಟು ಮತ್ತು ಇಂಡಿಯಾಬುಲ್ಸ್‌ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌ (ಐಎಚ್‌ಎಫ್‌ಎಲ್‌) ವಿರುದ್ಧದ ವಂಚನೆ ಆರೋ‍ಪದಿಂದಾಗಿ ಹೂಡಿಕೆ ಚಟುವಟಿಕೆ ಇಳಿಕೆಯಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ದೇಶದ ತಯಾರಿಕಾ ವಲಯದ ಬೆಳವಣಿಗೆ ಸೆಪ್ಟೆಂಬರ್‌ನಲ್ಲಿಯೂ ಮಂದಗತಿಯಲ್ಲಿಯೇ ಇದೆ. ವಾಹನ ವಲಯದ ಮಾರಾಟ ಪ್ರಗತಿಯೂ ಇಳಿಮುಖವಾಗಿದೆ. ಈ ಅಂಶಗಳು ಸಹ ಷೇರುಪೇಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.