ADVERTISEMENT

ಬಜೆಟ್‌ಗೆ ಷೇರು ಮಾರುಕಟ್ಟೆ ಸ್ವಾಗತ

ಪಿಟಿಐ
Published 1 ಫೆಬ್ರುವರಿ 2022, 20:19 IST
Last Updated 1 ಫೆಬ್ರುವರಿ 2022, 20:19 IST

ಮುಂಬೈ (ಪಿಟಿಐ): ಮೂಲಸೌಕರ್ಯ ವಲಯದ ಮೇಲೆ ಹೆಚ್ಚಿನ ಹೂಡಿಕೆ ಪ್ರಸ್ತಾವ ಇರುವ ಬಜೆಟ್ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ ದಿನ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 848 ಅಂಶ ಏರಿಕೆ ಕಂಡಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 17,500 ಅಂಶಗಳ ಗಡಿಯನ್ನು ಮತ್ತೆ ದಾಟಿತು.

ಲೋಹ, ರಿಯಾಲ್ಟಿ ಮತ್ತು ಸಿಮೆಂಟ್ ಕಂಪನಿಗಳ ಷೇರುಗಳ ಖರೀದಿ ಜೋರಾಗಿ ನಡೆಯಿತು. ಆಟೊಮೊಬೈಲ್, ಟೆಲಿಕಾಂ ಕಂಪನಿಗಳ ಷೇರುಗಳ ಮಾರಾಟ ಹೆಚ್ಚಿತ್ತು. ‘ಇದು ಬೆಳವಣಿಗೆಗೆ ಪೂರಕವಾಗಿರುವ ಬಜೆಟ್. ಇದನ್ನು ಷೇರು ಮಾರುಕಟ್ಟೆ ಸ್ವಾಗತಿಸಿದೆ. ಇದರಲ್ಲಿ ಜನಪ್ರಿಯ ಘೋಷಣೆಗಳು ಇಲ್ಲ. ಆದರೆ, ಗ್ರಾಮೀಣ ಪ್ರದೇಶ, ಕೃಷಿ ವಲಯ, ಕಡಿಮೆ ತೆರಿಗೆ ಪಾವತಿಸುವ ವಲಯಗಳಿಗೆ ಬೆಂಬಲದ ಅಗತ್ಯ ಇತ್ತು’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT