ADVERTISEMENT

ಷೇರುಪೇಟೆ | ಷೇರು ಸೂಚ್ಯಂಕಗಳು ಏರಿಕೆ

ಪಿಟಿಐ
Published 4 ಏಪ್ರಿಲ್ 2024, 14:12 IST
Last Updated 4 ಏಪ್ರಿಲ್ 2024, 14:12 IST
ಬಿಎಸ್‌ಇ
ಬಿಎಸ್‌ಇ   

ಮುಂಬೈ: ಸತತ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಷೇರು ಸೂಚ್ಯಂಕಗಳು ಗುರುವಾರ ಏರಿಕೆ ದಾಖಲಿಸಿವೆ.

ಐ.ಟಿ, ಗ್ರಾಹಕ ವಸ್ತುಗಳು ಮತ್ತು ಹಣಕಾಸು ಷೇರುಗಳ ಖರೀದಿ ಹೆಚ್ಚಳವು ಸೂಚ್ಯಂಕಗಳ ಏರಿಕೆಗೆ ನೆರವಾಯಿತು.  

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 350 ಅಂಶ ಹೆಚ್ಚಳವಾಗಿ 74,227ಕ್ಕೆ ಸ್ಥಿರಗೊಂಡಿದೆ. ವಹಿವಾಟಿನ ವೇಳೆ 74,501ಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 80 ಅಂಶ ಏರಿಕೆಯಾಗಿ 22,514ಕ್ಕೆ ಅಂತ್ಯಗೊಂಡಿತು.

ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌, ಟೈಟನ್‌, ಟೆಕ್‌ ಮಹೀಂದ್ರ, ಏಷ್ಯನ್ ಪೇಂಟ್ಸ್‌, ಟಿಸಿಎಸ್‌, ಮಾರುತಿ, ಕೋಟಕ್‌ ಮಹೀಂದ್ರ ಬ್ಯಾಂಕ್‌ ಮತ್ತು ಬಜಾಜ್‌ ಫಿನ್‌ಸರ್ವ್‌ ಷೇರಿನ ಮೌಲ್ಯ ಏರಿಕೆಯಾಗಿದೆ. ಎಸ್‌ಬಿಐ, ಭಾರ್ತಿ ಏರ್‌ಟೆಲ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಪವರ್‌ಗ್ರಿಡ್‌, ಐಟಿಸಿ ಮತ್ತು ರಿಲಯನ್ಸ್‌ ಷೇರಿನ ಮೌಲ್ಯ ಇಳಿಕೆ ಕಂಡಿದೆ.  

ಅವೆನ್ಯು ಸೂಪರ್‌ಮಾರ್ಟ್ಸ್‌ ಷೇರು ಏರಿಕೆ: 

ಡಿ–ಮಾರ್ಟ್‌ ಮಳಿಗೆಗಳ ಒಡೆತನ ಹೊಂದಿರುವ ಅವೆನ್ಯು ಸೂಪರ್‌ಮಾರ್ಟ್ಸ್‌ ಕಂಪನಿಯ ಕಾರ್ಯಾಚರಣೆ ವರಮಾನವು ಏರಿಕೆ ಕಂಡಿದೆ. ಹಾಗಾಗಿ, ಕಂಪನಿಯ ಷೇರಿನ ಮೌಲ್ಯ ಶೇ 4ಕ್ಕಿಂತಲೂ ಹೆಚ್ಚಳವಾಗಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಮೌಲ್ಯ ಕ್ರಮವಾಗಿ ₹4,647 ಮತ್ತು ₹4,639ಕ್ಕೆ ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.