ADVERTISEMENT

ಷೇರುಪೇಟೆ ವಹಿವಾಟು ಚೇತರಿಕೆ

ಔಷಧ ಮತ್ತು ಮಾಹಿತಿ ತಂತ್ರಜ್ಞಾನ ಷೇರುಗಳ ಗಳಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 19:57 IST
Last Updated 3 ಜುಲೈ 2018, 19:57 IST

ಮುಂಬೈ: ರೂಪಾಯಿ ಚೇತರಿಕೆ ಮತ್ತು ಸಂಸ್ಥಿಕ ಹೂಡಿಕೆಯ ಬೆಂಬಲದಿಂದಾಗಿ ದೇಶದ ಷೇರುಪೇಟೆಗಳ ವಹಿವಾಟು ಮಂಗಳವಾರ ತುಸು ಚೇತರಿಕೆ ಕಂಡುಕೊಂಡಿತು.

ಜಾಗತಿಕ ಮಟ್ಟದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾದರೂ ಉತ್ತಮ ಖರೀದಿ ಚಟುವಟಿಕೆಯು ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟಿಗೆ ಕಾರಣವಾಯಿತು. ರೂಪಾಯಿ ಮೌಲ್ಯ ದಾಖಲೆಯ ಕನಿಷ್ಠ ಮಟ್ಟದಿಂದ ಚೇತರಿಕೆ ಕಂಡಿದ್ದು ಸಹ ಸೂಚ್ಯಂಕವನ್ನು ಏರಿಕೆ ಕಾಣುವಂತೆ ಮಾಡಿತು ಎಂದು ದಲ್ಲಾಳಿಗಳು ಹೇಳಿದ್ದಾರೆ.

ಔಷಧ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು. ಇದರಿಂದಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 35,445 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. 114 ಅಂಶಗಳ ಏರಿಕೆಯೊಂದಿಗೆ 35,378 ಅಂಶಗಳಲ್ಲಿದಿನದ ವಹಿವಾಟು ಅಂತ್ಯಕಂಡಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 43 ಅಂಶ ಏರಿಕೆ ಕಂಡು 10,699 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಲೋಕಸಭೆ ಚುನಾವಣೆಯ ಪ್ರಭಾವ:ಲೋಕಸಭೆ ಚುನಾವಣೆಯ ಪ್ರಭಾವದಿಂದಾಗಿ ಷೇರುಪೇಟೆಗಳ ಸ್ಥಿತಿ ಚಂಚಲವಾಗಿರುವ ಸಾಧ್ಯತೆ ಇದೆ ಎಂದು ಹಣಕಾಸು ಸೇವಾ ಸಂಸ್ಥೆ ನೂಮುರಾ ಹೇಳಿದೆ.

ಹಲವು ಪಕ್ಷಗಳು ಸೇರಿಕೊಂಡು ತೃತೀಯ ರಂಗ ರಚನೆ ಮಾಡುವ ಪ್ರಯತ್ನದಲ್ಲಿವೆ. ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರಬರುವುದಾಗಿ ಕೆಲವು ಪಕ್ಷಗಳು ಬೆದರಿಕೆ ಒಡ್ಡುತ್ತಿವೆ. ಇದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿದೆ ಎಂದು ವಿಶ್ಲೇಷಣೆ ಮಾಡಿದೆ.

ನಿಫ್ಟಿ: 2018ರ ಡಿಸೆಂಬರ್‌ ಹೊತ್ತಿಗೆ ನಿಫ್ಟಿ 11,380ಕ್ಕೆ ತಲುಪಲಿದೆ ಎಂದು ನೂಮುರಾ ಅಂದಾಜು ಮಾಡಿದೆ. ಸದ್ಯ 10,700ರ ಆಸುಪಾಸಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.