ADVERTISEMENT

ದಸರಾ ಜಿಮ್ನಾಸ್ಟಿಕ್ಸ್: ಉಜ್ವಲ್‌, ಶ್ರೀವರ್ಷಿಣಿ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 19:16 IST
Last Updated 12 ಅಕ್ಟೋಬರ್ 2018, 19:16 IST
ಬೆಂಗಳೂರಿನ ಶ್ರೀವರ್ಷಿಣಿ ಅವರು ಮಹಿಳೆಯರ ಆರ್ಟಿಸ್ಟಿಕ್ಸ್‌ ಜಿಮ್ನಾಸ್ಟಿಕ್ಸ್‌ನ ಬ್ಯಾಲೆನ್ಸ್‌ ಬೀಮ್‌ನಲ್ಲಿ ಪ್ರದರ್ಶನ ನೀಡಿದರು
ಬೆಂಗಳೂರಿನ ಶ್ರೀವರ್ಷಿಣಿ ಅವರು ಮಹಿಳೆಯರ ಆರ್ಟಿಸ್ಟಿಕ್ಸ್‌ ಜಿಮ್ನಾಸ್ಟಿಕ್ಸ್‌ನ ಬ್ಯಾಲೆನ್ಸ್‌ ಬೀಮ್‌ನಲ್ಲಿ ಪ್ರದರ್ಶನ ನೀಡಿದರು   

ಮೈಸೂರು: ಬೆಂಗಳೂರಿನ ಉಜ್ವಲ್‌ ಸಿ ನಾಯ್ಡು ಮತ್ತು ಪಿ.ಎಸ್‌.ಶ್ರೀವರ್ಷಿಣಿ ಅವರು ದಸರಾ ಅಂಗವಾಗಿ ನಡೆಯುತ್ತಿರುವ ಜಿಮ್ನಾಸ್ಟಿಕ್ಸ್‌ ಕೂಟದ ಆರ್ಟಿಸ್ಟಿಕ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಆಲ್‌ರೌಂಡ್ ವಿಭಾಗದಲ್ಲಿ ಚಾಂಪಿಯನ್‌ ಆದರು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಉಜ್ವಲ್ ಅವರು 77.6 ಪಾಯಿಂಟ್‌ ಕಲೆಹಾಕಿದರು. 69.7 ಪಾಯಿಂಟ್‌ ಕಲೆಹಾಕಿದ ಧಾರವಾಡದ ಅಮೃತ್ ಎರಡನೇ ಸ್ಥಾನ ಹಾಗೂ ಬೆಂಗಳೂರಿನ ಉದಯ್ ಸಿ ನಾಯ್ಡು (64) ಮೂರನೇ ಸ್ಥಾನ ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ ಶ್ರೀವರ್ಷಿಣಿ 42.07 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಗಳಿಸಿದರು. ಆರ್ಟಿಸ್ಟಿಕ್‌ ಮತ್ತು ಏರೊಬಿಕ್ಸ್ ಜಿಮ್ನಾಸ್ಟಿಕ್ಸ್‌ನಲ್ಲಿ ಬೆಂಗಳೂರಿನ ಸ್ಪರ್ಧಿಗಳು ಪ್ರಾಬಲ್ಯ ಮೆರೆದರು.

ADVERTISEMENT

ಫಲಿತಾಂಶ ಹೀಗಿದೆ: ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌: ಪುರುಷರ ವಿಭಾಗ: ಉಜ್ವಲ್‌ ಸಿ ನಾಯ್ಡು (ಬೆಂಗಳೂರು, 77.6 ಪಾಯಿಂಟ್)–1, ಅಮೃತ್‌ (ಧಾರವಾಡ, 69.7), ಉದಯ್‌ ಸಿ ನಾಯ್ಡು (ಬೆಂಗಳೂರು, 64)–3

ತಂಡ ವಿಭಾಗ: ಬೆಂಗಳೂರು (328.24)–1, ಧಾರವಾಡ (320.24)–2, ತುಮಕೂರು (275.75)–3

ಮಹಿಳೆಯರ ವಿಭಾಗ: ಶ್ರೀವರ್ಷಿಣಿ (ಬೆಂಗಳೂರು, 42.07 ಪಾಯಿಂಟ್)–1, ರಿತಿಕಾ (ಧಾರವಾಡ, 38.3)–2, ಸ್ನೇಹಾ (ಬೆಂಗಳೂರು, 36.05)–3

ತಂಡ ವಿಭಾಗ: ಬೆಂಗಳೂರು (158.625)–1, ಧಾರವಾಡ (139.73)–2, ತುಮಕೂರು (64.65)–3

ಏರೊಬಿಕ್ಸ್‌ ಜಿಮ್ನಾಸ್ಟಿಕ್ಸ್: ಪುರುಷರ ವಿಭಾಗ: ಬಿ.ಆರ್‌.ಅದಿತ್ (ಬೆಂಗಳೂರು, 14.3 ಪಾಯಿಂಟ್)–1, ಪ್ರಯಾಣ್ (ಬೆಂಗಳೂರು, 13.35)–2, ಸುಮಿತ್ (ಧಾರವಾಡ, 11.1)–3

ಮಹಿಳೆಯರ ವಿಭಾಗ: ಸಿ.ಸಹರ್ಷ (ಬೆಂಗಳೂರು, 16.2)–1, ವಿಭಾ ಶ್ರುತಿ (ಬೆಂಗಳೂರು, 14.35), ಶಮ್ಯಾ (ಧಾರವಾಡ, 9.9)–3

ತಂಡ ವಿಭಾಗ: ಬೆಂಗಳೂರು (226.75)–1, ಧಾರವಾಡ (53.2)–2, ಮೈಸೂರು (48.4)–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.