ADVERTISEMENT

‘ಮನಸ್ಸಿನ ನೆಮ್ಮದಿಗೆ ಧ್ಯಾನ ಅಗತ್ಯ’

ಶಿವರಾತ್ರಿ ಕಾರ್ಯಕ್ರಮದಲ್ಲಿ ಬಿ.ಕೆ.ಲಕ್ಷ್ಮೀ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:02 IST
Last Updated 22 ಫೆಬ್ರುವರಿ 2020, 11:02 IST
ಕನಕಗಿರಿಯ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಸ್ಥಾಪಿಸಲಾದ ಶಿವಲಿಂಗ
ಕನಕಗಿರಿಯ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಸ್ಥಾಪಿಸಲಾದ ಶಿವಲಿಂಗ   

ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಮಹಾ ಶಿವರಾತ್ರಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಶಿವಲಿಂಗ ಸ್ಥಾಪಿಸಿ ಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರಾಜಯೋಗ ಭವನವನ್ನು ಹೂವು, ತಳಿರು, ತೋರಣಗಳಿಂದ ಅಲಂಕಾರಗೊಳಿಸಲಾಗಿತ್ತು.

ಬೆಳಿಗ್ಗೆ ಶಿವಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ADVERTISEMENT

ನೂತನ ರಾಜಯೋಗ ಭವನದಲ್ಲಿ ಬ್ರಹ್ಮಕುಮಾರಿ ಲಕ್ಷ್ಮೀ ಜಿ ಮಾತನಾಡಿ,‘ಮಾನವರು ಇಂದು ವಿವಿಧ ಕಾರಣಗಳಿಂದಾಗಿ ಒತ್ತಡದಲ್ಲಿ ಜೀವನವನ್ನು ಕಳೆಯುತ್ತಿದ್ದಾರೆ. ಮನಃ ಶಾಂತಿಗಾಗಿ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ’ ಎಂದರು.

ಪ್ರಮುಖರಾದ ಶೇಖರಗೌಡ ಪಾಟೀಲ, ಗುರುಸಿದ್ದಪ್ಪ ಹಾದಿಮನಿ, ಮುದುಕಪ್ಪ ಕಡಿ, ಮಹಾಂತೇಶ ತಾಡಪತ್ರಿ, ಗವಿಸಿದ್ದಪ್ಪ, ಸುಮಾ ಹಾಗೂ ರೇಣುಕಾ ಇದ್ದರು.‌

ಪಟ್ಟಣದ ಪಂಪಾಪತಿ ದೇವಸ್ಥಾನ, ರಾಮಲಿಂಗೇಶ್ವರ , ಅಗಸಿ ಹನುಮಪ್ಪ, ಐತಿಹಾಸಿಕ ಕನಕಾಚಲಪತಿ ದೇವಸ್ಥಾನ ಗಳಲ್ಲಿ ಹೂವಿನ ಅಲಂಕಾರ, ಅಭಿಷೇಕ, ಕುಂಕಮಾರ್ಚನೆ, ಮಂಗಳಾರುತಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.