ADVERTISEMENT

ವಚನಾಮೃತ: ದೇವರ ಪೂಜೆಗೆ ತಿಥಿ ನೋಡಬೇಕಿಲ್ಲ

​ಪ್ರಜಾವಾಣಿ ವಾರ್ತೆ
Published 4 ಮೇ 2022, 6:20 IST
Last Updated 4 ಮೇ 2022, 6:20 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮ‍ಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

–––––

ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯಾ

ADVERTISEMENT

ರಾಶಿ ಕೂಟ ಗಣಸಂಬಂಧವುಂಟೆಂದು ಹೇಳಿರಯ್ಯಾ

ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ

ನಾಳಿನದಿನಕಿಂದಿನದಿನ ಲೇಸೆಂದು ಹೇಳಿರಯ್ಯಾ

ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ!

ಭಗವಂತನ ಪೂಜೆಗೆ ಶ್ರದ್ಧೆ–ನಿಷ್ಠೆಯೇ ಮುಖ್ಯವಾಗಬೇಕೆ ಹೊರತು ಪೂಜಿಸುವ ಸಮಯ, ಕಾಲ, ನಕ್ಷತ್ರ, ತಿಥಿಗಳು ಮುಖ್ಯವಲ್ಲ. ಯಾರಾದರೂ ಭಗವಂತನನ್ನು ಪೂಜಿಸುವ ಸಮಯ ಕೇಳಿದಾಗ, ನಾವು ರಾಶಿಗಳನ್ನು ನೋಡದೆ, ಚಂದ್ರಬಲ, ತಾರಾಬಲಗಳನ್ನು ನೋಡದೆ, ನಾಳೆ ನಾಡಿದ್ದು ಎನ್ನದೆ, ತತ್‌ಕ್ಷಣದ ಸಮಯವೆ ಶ್ರೇಷ್ಠ ಎನ್ನಬೇಕು ಎನ್ನುವುದನ್ನು ಈ ವಚನದ ಮೂಲಕ ತಿಳಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸರ್ವರೂ ತಿಥಿ, ನಕ್ಷತ್ರ, ರಾಶಿಗಳನ್ನೆ ನೋಡಿಯೇ ಪೂಜಾದಿ ಕ್ರಿಯೆಗಳನ್ನು ಮಾಡುತ್ತಾರೆ. ಮನಸ್ಸಿನಲ್ಲಿ ಭಕ್ತಿ, ಶ್ರದ್ಧೆ, ನಿಷ್ಠೆಗಳನ್ನು ಇಟ್ಟುಕೊಂಡು ನಾವು ಯಾವ ಸಮಯದಲ್ಲಾದರೂ ಭಗವಂತನ ಆರಾಧನೆ ಮಾಡಬಹುದು. ಅದಕ್ಕಾಗಿಯೇ ಇನ್ನೊಂದು ಕಡೆ ಶರಣ ನಿದ್ರೆಗೈದಡೆ ಜಪ ಕಾಣಿರೋ, ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.