ADVERTISEMENT

ಆತ್ಮಾಭಿಮಾನ ಬೆಳೆಯಲಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 13:08 IST
Last Updated 25 ಡಿಸೆಂಬರ್ 2020, 13:08 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ   

ಯೌವ್ವನ ಕಳೆದ ಮೇಲೆ, ಮುಪ್ಪು ಬಂದ ಮೇಲೆ, ದೇಹದ ಚರ್ಮ ಸುಕ್ಕುಗಟ್ಟಿ ಸುಲಿದು ಹೋಗುತ್ತದೆ. ದೇಹದಲ್ಲಿನ ಮಾಂಸವಾದರೂ ಅನೇಕ ರೋಗ ರುಜಿನಗಳಿಗೆ ಸಿಕ್ಕು ಕೃಶವಾಗಿ ಬಿಡುತ್ತದೆ. ಈ ದೇಹಕ್ಕೆ ಮರುಳಾಗಬೇಡ. ದೇಹದೊಳಗಣ ಶಾಶ್ವತವಾದ, ಸತ್ಯನಾದ, ಪರಿಶುದ್ಧನಾದ ಆತ್ಮನನ್ನು ಅರಿತುಕೊ ಎನ್ನುತ್ತಾಳೆ ಅಕ್ಕಮಹಾದೇವಿ.

ಮುಂದುವರೆದು ನಾನಾದರೋ ಚನ್ನಮಲ್ಲಿಕಾರ್ಜುನ ಎಂಬ ಶಿವಪರಮಾತ್ಮನಿಗೆ ಒಲಿದ ಆತ್ಮಳಾಗಿದ್ದೇನೆ. ಈ ಕಾಯ ಕರ್ರಗಿರಲಿ, ಮಿರ್ರನೆ ಮಿಂಚುತಿರಲಿ ಕಾಯ ತಾತ್ಕಾಲಿಕ. ಕಾಯಭಾವ ಬೇಡವೆಂದು ಆತ್ಮಜ್ಞಾನ ಹೇಳುತ್ತಾಳೆ.

ಎಮ್ಮೆಗೊಂದು ಚಿಂತೆ, ಸಮಗಾರನಿಗೊಂದು ಚಿಂತೆ, ಎಮ್ಮೆಗೆ ಹುಲ್ಲು ಮೆಯುವ ಚಿಂತೆ, ಸಮಗಾರನಿಗೆ ಎಮ್ಮೆಯ ಚರ್ಮ ಸುಲಿದುಕೊಳ್ಳುವ ಚಿಂತೆ. ಹೀಗೆ ಅಕ್ಕಮಹಾದೇವಿಗೆ ಪರಮಾತ್ಮನ ಚಿಂತೆ. ಕೌಶಿಕ ಮಹಾರಾಜನಿಗೆ ಅಕ್ಕಮಹಾದೇವಿಯ ಚರ್ಮ ಸವಿಯು ಚಿಂತೆ, ದೇಹಾಭಿನಾ ಬಂದು ಬಿಟ್ಟರೆ ಎಲ್ಲರೂ ಚರ್ಮದ ಬಲೆಯಲ್ಲಿ ಬಿದ್ದು ಬಿಡುತ್ತಾರೆ.

ADVERTISEMENT

ಚರ್ಮಾಭಿಮಾನವನ್ನು ಅಳಿದು ಆತ್ಮಾಭಿಮಾನದಲ್ಲಿ ಬೆಳೆದ ಶರಣರು ವಿಶ್ವಭಾತೃತ್ವದ ಸದ್ಭಾವನೆಯನ್ನು ಬೆಳೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.