ADVERTISEMENT

ಆನೆ ದಾಳಿಗೆ ಒಬ್ಬ ಬಲಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 8:45 IST
Last Updated 11 ಜೂನ್ 2013, 8:45 IST

ಜೋಯಿಡಾ: ಒಂಟಿ ಸಲಗವೊಂದು ದಾಳಿ ನಡೆಸಿದ್ದರಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ನಾಗೋಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಂಜೇಲಿ ಸಮೀಪದ ಕಾಯಲೋವಾಡಾದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ಮಹಾದೇವ ಅಪ್ಪಾಜಿ ದೇಸಾಯಿ (45) ಎಂದು ಗುರುತಿಸಲಾಗಿದೆ. ಇವರು ಮನೆಗೆ ಹೋಗುವಾಗ ದಾರಿ ಮಧ್ಯೆ ಇರುವ ಬಾಳೆತೋಟದಲ್ಲಿದ್ದ ಆನೆ ದಿಢೀರ್ ದಾಳಿ ನಡೆಸಿದೆ. ಆನೆ ತುಳಿದ ಪರಿಣಾಮ ಮಹಾದೇವ ಅವರ ಎದೆ, ಹೊಟ್ಟೆ ಭಾಗದಲ್ಲಿ ಗಾಯಗಳಾಗಿವೆ.

ಈ ದುರ್ಘಟನೆ ಅವರ ಮನೆ ಪಕ್ಕದಲ್ಲಿಯೇ ನಡೆದಿದ್ದರೂ ಮನೆಯವರಿಗೆ ವಿಷಯ ಗೊತ್ತಾಗಿರಲಿಲ್ಲ. ಮಹಾದೇವ ಅವರ ಸಹೋದರ ಮುಂಜಾನೆ ಹೊಲಕ್ಕೆ ಹೋದಾಗ ಗೊತ್ತಾಗಿದೆ.

ಪರಿಹಾರ: ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಮಹಾದೇವ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಅಂತ್ಯ ಸಂಸ್ಕಾರದ ವೆಚ್ಚಕ್ಕೆಂದು ಅರಣ್ಯ ಇಲಾಖೆ ಅಧಿಕಾರಿಗಳು 5,000 ರೂಪಾಯಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.