ADVERTISEMENT

ಆರ್‌ಟಿಪಿಎಸ್: 6 ಘಟಕಗಳಿಂದ 1,100 ಮೆ. ವಿದ್ಯುತ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ರಾಯಚೂರು: ಇಲ್ಲಿನ ಆರ್‌ಟಿಪಿಎಸ್‌ನ 8 ಘಟಕಗಳಲ್ಲಿ ಆರು ಘಟಕಗಳು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಶುಕ್ರವಾರ 1,100 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗಿದೆ. ಒಂದು ಮತ್ತು ಎರಡನೇ ಘಟಕಗಳಲ್ಲಿ ತಾಂತ್ರಿಕ ದುರಸ್ತಿ ಕಾರಣ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

1.20 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆರ್‌ಟಿಪಿಎಸ್ ಸಂಗ್ರಹಾಗಾರದಲ್ಲಿದೆ. ಶುಕ್ರವಾರ ನಾಲ್ಕು ರೇಕ್ (ಪ್ರತಿ ರೇಕ್‌ನಲ್ಲಿ 3,500 ಮೆಟ್ರಿಕ್ ಟನ್) ಕಲ್ಲಿದ್ದಲು ಸರಬರಾಜು ಆಗಿದೆ ಎಂದು ಆರ್‌ಟಿಪಿಎಸ್ ಅಧಿಕಾರಿಗಳು ಹೇಳಿದ್ದಾರೆ.

ಆರ್‌ಟಿಪಿಎಸ್‌ನಲ್ಲಿ ಸದ್ಯ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿರುವ ಘಟಕಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿದರೆ 1300 ಮೆಗಾವಾಟ್ ದೊರಕಬೇಕು. ಆದರೆ, 1100 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಕಲ್ಲಿದ್ದಲು ಸಮಸ್ಯೆ, ತಾಂತ್ರಿಕ ಸಮಸ್ಯೆಗಳೆಲ್ಲವನ್ನೂ ನೀಗಿ ಆರ್‌ಟಿಪಿಎಸ್ ಘಟಕಗಳು ವಿದ್ಯುತ್ ಉತ್ಪಾದನೆಯಲ್ಲಿ ಸುಧಾರಣೆಯತ್ತ ಹೆಜ್ಜೆ ಇರಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.