ADVERTISEMENT

ಉದ್ಯೋಗ ಖಾತ್ರಿ ಕೂಲಿಗಾಗಿ ಧರಣಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST
ಉದ್ಯೋಗ ಖಾತ್ರಿ ಕೂಲಿಗಾಗಿ ಧರಣಿ
ಉದ್ಯೋಗ ಖಾತ್ರಿ ಕೂಲಿಗಾಗಿ ಧರಣಿ   

ಕೋಲಾರ: ಉದ್ಯೋಗ ಖಾತ್ರಿ ಯೋಜನೆಡಿ ಮಾಡಿದ ಕೆಲಸದ ಕೂಲಿ ನೀಡಬೇಕು ಎಂದು 50 ದಿನದಿಂದ ಆಗ್ರಹಿಸುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ವಡಗೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಶುಕ್ರವಾರ ಕೂಲಿಕಾರರು ಧರಣಿ ನಡೆಸಿದರು.

ಇದೇ ವೇಳೆ, ಉದ್ಯೋಗ ಖಾತ್ರಿ ಕೂಲಿಗಾಗಿ 12 ದಿನದಿಂದ ಧರಣಿ ನಡೆಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಐತರಾಸಹನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೂಲಿಕಾರರು ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಶುಕ್ರವಾರ ಅಧಿಕಾರಿಗಳ ಪ್ರತಿಕೃತಿ ಶವವಿಷ್ಟು ಧರಣಿ ನಡೆಸಿದರು.

 ವಡಗೂರು ಪಂಚಾಯಿತಿಯ ಕಾಳಹಸ್ತಿಪುರ, ಚೆನ್ನರಾಯಪುರ, ತಿಮ್ಮಸಂದ್ರ ಮತ್ತಿತರ ಕಡೆಗಳಲ್ಲಿ ಖಾತ್ರಿ ಯೋಜನೆ ಅಡಿ ಕೆಲಸ ಮಾಡಿದವರಿಗೆ ಕೂಲಿ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಭ್ರಷ್ಟ ಅಧಿಕಾರಿಗಳೊಡನೆ ಪಂಚಾಯಿತಿ ಸದಸ್ಯರು ಶಾಮೀಲಾಗಿದ್ದಾರೆ. ನಿಜವಾದ ಕೂಲಿಗಾರರಿಗೆ ಶ್ರಮದ ಹಣವೇ ದೊರಕುತ್ತಿಲ್ಲ ಎಂದು ದೂರಿದರು. ಉತ್ತಮ ಅಧಿಕಾರಿಗಳನ್ನು ನೇಮಿಸಿ ಕೂಲಿಗಾರರ ಹಿತ ಕಾಪಾಡಬೇಕೆಂದು ಆಗ್ರಹಿಸಿದರು. ವಿ.ಗೀತಾ, ಸುಶೀಲಾ, ಆಂಜಿನಮ್ಮ, ಜಯರಾಂ, ಮಣಿ,. ನಾರಾಯಣರೆಡ್ಡಿ, ಕೆಂಬೋಡಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

 ಐತರಾಸನಹಳ್ಳಿಯ ಗ್ರಾಮ ಪಂಚಾಯಿತಿ ಮುಂದೆ  11 ದಿನದಿಂದ ನಡೆಸುತ್ತಿದ್ದ ಧರಣಿಯಿಂದ ಯಾವುದೇ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ ಧರಣಿಯನ್ನು ತಾಲ್ಲೂಕು ಪಂಚಾಯಿತಿ ಕಚೇರಿಗೆ ಸ್ಥಳಾಂತರಿಸಲಾಗಿದೆ. ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಪ್ರತಿಕೃತಿ ಶವದ ಮುಂದೆ ಧರಣಿ ಮುಂದುವರಿಯಲಿದೆ ಎಂದು ಕೂಲಿಗಾರರು ತಿಳಿಸಿದರು.

ಮಂಜುನಾಥ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.