ADVERTISEMENT

ಕನಕಪುರದಿಂದ ಬೆಂಗಳೂರಿಗೆ ವೋಲ್ವೋ ಬಸ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 10:10 IST
Last Updated 17 ಸೆಪ್ಟೆಂಬರ್ 2013, 10:10 IST

ಕನಕಪುರ; ‘ಸರ್ಕಾರಿ ನೌಕರರು ಸೇರಿದಂತೆ ದಿನನಿತ್ಯದ ಕೆಲಸ ಕಾರ್ಯ ಗಳಿಗಾಗಿ ಕನಕಪುರದಿಂದ ಬೆಂಗಳೂರಿಗೆ ತೆರಳುವ ಸಾವಿರಾರು ಪ್ರಯಾಣಿಕರಿಗೆ ಹವಾನಿಯಂತ್ರಿತ ಐಷಾರಾಮಿ ಬಸ್ಸಿನ ಸೌಕರ್ಯ ಒದಗಿಸ ಬೇಕು ಎಂಬುದು  ಬಹುದಿನಗಳ ಕನಸಾಗಿತ್ತು ಅದು ಇಂದು ನೇರವೇರಿದೆ ’ ಎಂದು ಸಂಸದ ಡಿ.ಕೆ. ಸುರೇಶ್‌  ಹೇಳಿದರು. 

ಪಟ್ಟಣ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿ ಕೊಂಡಿದ್ದ ಐಷಾರಾಮಿ ಬಸ್ಸುಗಳ ಸಾರ್ವಜನಿಕ ಸೇವೆ ಸಮರ್ಪಿಸುವ ಸಮಾರಂಭದಲ್ಲಿ  ಮಾತನಾಡಿದರು. ಕಳೆದ ಒಂದು ವರ್ಷಗಳ ಹಿಂದೆಯೆ ಐಷಾರಾಮಿ ಬಸ್ಸುಗಳನ್ನು ಕನಕಪುರ ದಿಂದ ಬೆಂಗಳೂರಿಗೆ ಓಡಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸಿದ್ದೆ.  ಅದೃಷ್ಟವಶಾತ್‌ ನಾನು ಸಂಸದನಾದ ಮೇಲೆ ವೋಲ್ವೊ ಬಸ್ಸುಗಳು ಬಂದಿದ್ದು ಅವುಗಳ ಉದ್ಘಾಟನಾ ಕಾರ್ಯಕ್ರಮ ದಲ್ಲಿ    ಪಾಲ್ಗೊಳ್ಳಲು ಅವಕಾಶ ದೊರೆ ತಿರುವುದು ಸಂತಸ ತಂದಿದೆ. 

ತಾಲ್ಲೂಕಿನ ಜೈನ್‌ ವಿದ್ಯಾಸಂಸ್ಥೆಗೆ 17 ಸಾರಿಗೆ ಬಸ್ಸುಗಳನ್ನು ನೀಡಿರು ವುದರಿಂದ ಪ್ರಯಾಣಿಕರಿಗೆ ತೊಂದರೆ ಯಾಗುತ್ತಿದೆ. ಇದರ ವಿರುದ್ಧವಾಗಿ ಸಾಕಷ್ಟು ಪ್ರತಿ ಭಟನೆಗಳು ನಡೆದಿದ್ದು ಸಾರ್ವ ಜನಿಕರ ಸಮಸ್ಯೆ ನನಗೆ ಅರ್ಥ ವಾಗುತ್ತದೆ. ಆದರೆ ಜೈನ್‌ ವಿದ್ಯಾ ಸಂಸ್ಥೆಗೆ ಹೋಗು ತ್ತಿರುವವರು ನಮ್ಮ ಮಕ್ಕಳೇ ಅವರಿಗೆ ತೊಂದರೆ ಕೊಡು ವುದು ಬೇಡ. ಅದರ ಬದಲಾಗಿ ಸಾರಿಗೆ ಇಲಾಖೆ ಅಧಿಕಾರಿ ಗಳು ಇನ್ನು ಹೆಚ್ಚಿನ ಬಸ್ಸಿನ ಸೌಕರ್ಯ ಕಲ್ಪಿಸಿ ಸಮಸ್ಯೆಗೆ  ಪರಿಹಾರ ದೊರ ಕಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಕೆ.ಶಿವಕುಮಾರ್‌ ಮಾತ ನಾಡಿ    ಕಾಂಕ್ರೀಟ್‌ರಸ್ತೆ, 10 ಪೈಸೆಗೆ ಒಂದು ಲೀಟರ್‌ನಂತೆ 20ಲೀಟರ್‌ ಶುದ್ದ ಕುಡಿಯುವ ನೀರು,  ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ   ಕನಕಪುರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದೇನೆ ಎಂದರು.

ಈಗಿನ ಬಸ್‌ ನಿಲ್ದಾಣವನ್ನು  ಅಭಿ ವೃದ್ಧಿಪಡಿಸಲು ತೀರ ಚಿಕ್ಕದಾಗಿದ್ದು ನಿಲ್ದಾಣದ ಹಿಂಭಾಗದಲ್ಲಿದ್ದ ಎರಡು ಎಕರೆ ಜಮೀನನ್ನು  ಸಂಬಂಧಪಟ್ಟವರ ಮನವೊಲಿಸಿ ವಶಕ್ಕೆ ಪಡೆದು  ಬಸ್ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು ಎಂದರು.

ಉದ್ಯೋಗ ಹರಸಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಲು ಇಲ್ಲಿಯೇ ಉದ್ಯೋಗ ಸೃಷ್ಟಿಸ ಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಯನ್ನು 4 ಪಥಗಳ ನಿರ್ಮಾಣಕ್ಕೆ ಹಾಗೂ ಬೈಪಾಸ್‌ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ  300 ಕೋಟಿ ಹಣ ಬಿಡುಗಡೆಗೊಂಡಿದೆ ಎಂದು ಹೇಳಿದರು.

ಕನಕಪುರ ಕ್ಷೇತ್ರದಲ್ಲಿ ಪ್ರಾರಂಭ ಗೊಂಡ ಶುದ್ದಕುಡಿಯುವ ನೀರಿನ ಘಟಕವನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿ 100 ಘಟಕಗಳನ್ನು ತೆರೆಯಲಾಗುವುದು ಎಂದರು.

ಬೆಂಗಳೂರು ಗ್ರಾಮಾಂತರ ಲೋಕ ಸಭಾ ಕ್ಷೇತ್ರದ ಉಪಚುನಾವಣೆ ಯಲ್ಲಿ ಡಿ.ಕೆ. ಸುರೇಶ್‌ ಅವರನ್ನು ಗೆಲ್ಲಿಸಿದ ಹಿನ್ನೆಲೆಯಲ್ಲಿ ಇದೇ ಸೆಪ್ಟೆಂಬರ್‌ 19ರಂದು ಮತದಾರರಿಗೆ ಮತ್ತು ಸಾರ್ವಜನಿಕರಿಗೆ ಅಭಿನಂದನೆ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಾಲ್ಕು ಐಷಾರಾಮಿ ಬಸ್ಸುಗಳನ್ನು ಈ ವೇಳೆ ಸೇವೆಗೆ ಸಮರ್ಪಿಸಲಾಯಿತು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ರವಿ,  ಸಾರಿಗೆ ಇಲಾಖೆಯ ವ್ಯವ ಸ್ಥಾಪಕ ನಿರ್ದೇಶಕ ಮಂಜುನಾಥ್‌   ಪ್ರಸಾದ್‌, ಪುರಸಭೆ ಮಾಜಿ ಅಧ್ಯಕ್ಷ ಆರ್‌.ಕೃಷ್ಣಮೂರ್ತಿ, ಪುರಸಭೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾ ಯಿತಿ ಸದಸ್ಯರು, ಕಾಂಗ್ರೆಸ್‌ನ ಜಿಲ್ಲಾ ಉಪಾಧ್ಯಕ್ಷ ಎಂ.ಶ್ರೀನಿವಾಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ದಿಲೀಪ್‌  ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.