ADVERTISEMENT

ಕೃಷ್ಣಮೃಗ ಬೇಟೆ: 6 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ಧರ್ಮಪುರ (ಚಿತ್ರದುರ್ಗ ಜಿಲ್ಲೆ): ಸಮೀಪದ ಹೊಸಕೆರೆ ಗ್ರಾಮದ ಬಳಿ ಶನಿವಾರ ನಡೆದ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ.

ಬೆಂಗಳೂರಿನ ರಪೀಕ್ ಮಹಮ್ಮದ್, ಬೇಗ್, ಅಬ್ಬಾಸ್ ಹೈದರ್ ಹಾಗೂ ಶಿರಾದ ಹುಸೇನ್ ಆಲಿ, ಚಂದ್ರಶೇಖರ್ ಮತ್ತು ನಾಗರಾಜ್ ಬಂಧಿತರು. ಇವರಲ್ಲಿ ಬೇಗ್ ಎಂಜಿನಿಯರ್ ಪದವೀಧರ. ಅವರು ಲೈಸನ್ಸ್ ಪಡೆದಿರುವ ಎರಡು ರೈಫಲ್‌ಗಳನ್ನು ಹೊಂದಿದ್ದು, ಮಾಂಸಕ್ಕಾಗಿ ಕೃಷ್ಣಮೃಗ ಬೇಟೆಗೆ ಬಂದಿದ್ದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಆರೋಪಿಗಳಿಂದ ಒಟ್ಟು 26 ಗುಂಡುಗಳು, 2 ರೈಫಲ್, 1 ಕ್ಯಾಮೆರಾ, ಒಂದು ಬೈನಾಕ್ಯುಲರ್ ಹಾಗೂ ಟಾಟಾ ಸುಮೊ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.