ADVERTISEMENT

ಕೆರೆ ನೀರು ಬಳಸಿ; ಜಾನುವಾರು ರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಮಳವಳ್ಳಿ: ಜನ ಜಾನುವಾರು ಉಳಿವಿಗೆ ಕೆರೆ ಕಟ್ಟೆಗಳಲ್ಲಿರುವ ನೀರನ್ನು ಸಂರಕ್ಷಣೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ದಾಸನದೊಡ್ಡಿಯಲ್ಲಿ ಭಾನುವಾರ ವಿಶೇಷ ಅನುದಾನದ ಅಡಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಮಳೆ ಬಾರದೆ ಅಂತರ್ಜಲ ಕುಸಿತ ಕಂಡು ನೀರಿಗೆ ತೊಂದರೆಯಾಗಿದೆ. ಮುಂದಿನ ಬೇಸಿಗೆ ಕಳೆಯಬೇಕಾದರೆ ಎಲ್ಲರೂ ಕೆರೆಕಟ್ಟೆಗಳಲ್ಲಿರುವ ನೀರನ್ನು ಬೆಳೆಗೆ ಉಪಯೋಗಿಸದೆ ಜನ ಜಾನುವಾರುಗಳ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳಿ ಎಂದರು.

ಬಿ.ಜಿ.ಪುರ ಹೋಬಳಿಯ 56 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಇನ್ನೊಂದು ತಿಂಗಳಲ್ಲಿ ಪೂರೈಕೆಯಾಗಲಿದೆ.
ಈಗಾಗಲೇ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಮುಂದಿನ ವಾರ ಪ್ರಾಯೋಗಿಕ ಚಾಲನೆ ನೀಡಲಾಗುವುದು. 65 ವರ್ಷಗಳಿಂದ ಆಯ್ಕೆಯಾದ ಸ್ಥಳೀಯ ಶಾಸಕರು ಹಾಗೂ ನಾನು  ಶಾಸಕನಾದ ನಂತರದಲ್ಲಿ ಕ್ಷೇತ್ರದ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರೇ ತೀರ್ಪು ನೀಡಬೇಕು. ಇದನ್ನು ಬಿಟ್ಟು ರಾಜಕಾರಣಿಗಳ ಮಾಡುವ ಟೀಕೆಗಳೀಗೆ ಅಂಜುವುದಿಲ್ಲ ಎಂದರು. ವಿಶೇಷ ಅನುದಾನದಲ್ಲಿ  ರೂ.2.55 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.