ADVERTISEMENT

ಕ್ರೀಡಾಪಟುಗಳಿಗೆ ತರಬೇತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 19:30 IST
Last Updated 12 ಏಪ್ರಿಲ್ 2011, 19:30 IST

ದೇವನಹಳ್ಳಿ : ಗ್ರಾಮೀಣ ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ನೀಡಿ ಅವರ ಪ್ರತಿಭೆಯನ್ನು ಹೊರತರಬೇಕಿದೆ ಎಂದು ಪುರಸಭೆ ಸದಸ್ಯ ವಸಂತಬಾಬು ತಿಳಿಸಿದರು. ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಜೆ.ಸಿ.ಐ ಸಂಸ್ಥೆ , ಕ್ರೀಡಾ ಇಲಾಖೆ ಮತ್ತು ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಬೇಸಿಗೆ ಉಚಿತ ಕ್ರೀಡಾ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಹಲವು ಕ್ರೀಡಾ ಪಟುಗಳು ಗ್ರಾಮೀಣ ಪ್ರದೇಶದಲ್ಲಿದ್ದರೂ ವ್ಯವಸ್ಥಿತ ತರಬೇತಿ, ಮಾರ್ಗದರ್ಶನ ದೊರಕುತ್ತಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಕ್ರೀಡಾ ಪಟುಗಳನ್ನು ಸಂಘ ಸಂಸ್ಥೆಗಳು, ಪ್ರಯೋಜಕರು ಗುರುತಿಸಿ ನೆರವು ನೀಡಬೇಕು. ಕ್ರೀಡೆ ನಿತ್ಯ ಜೀವನದ ಭಾಗವಾಗಬೇಕು. ಪ್ರತಿಯೊಬ್ಬರು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

ಕ್ರೀಡಾ ಸಂಘದ ಅಧ್ಯಕ್ಷ ಟಿ.ಆರ್.ಲೋಕೇಶ್ ಮಾತನಾಡಿ, 450 ವಿದ್ಯಾರ್ಥಿಗಳಿಗೆ ಶಿಬಿರದಲ್ಲಿ ಉಚಿತ ತರಬೇತಿ ನೀಡಲಾಗುತ್ತಿದೆ, ಮೇಘನಾ, ಕಿಶನ್, ರೋಷಿಣಿ ರಾಷ್ಟೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಸ್.ರೋಹಿಣಿ ರಾಷ್ಟ್ರ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ಥ್ರೋಬಾಲ್ ನಲ್ಲಿ ಆಯ್ಕೆಗೊಂಡಿರುವುದು ಹೆಮ್ಮೆ ಎನಿಸಿದೆ ಎಂದರು. ಸಂಘದ ಸದಸ್ಯ ಬಿ.ಪುಟ್ಟಸ್ವಾಮಿ, ಜೆ.ಸಿ.ಐ ಅಧ್ಯಕ್ಷ ವಿಜಯಕುಮಾರ್ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ರತ್ನಮ್ಮ ರವಿಕುಮಾರ್ ಶಿಬಿರ ಉದ್ಘಾಟಿಸಿದರು, ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ನಿರ್ದೇಶಕ ಎನ್ ರಮೇಶ್, ಸೈಕಲ್ ರವಿಕುಮಾರ್, ಜೆ.ಸಿ.ಐ ನಿಕಟಪೂರ್ವ ಅಧ್ಯಕ್ಷರಾದ ಜಿ.ಎ.ರವೀಂದ್ರ,  ಡಿ.ಎಸ್ ನಾರಾಯಣ್ವಾಮಿ, ಸಹ ಕಾರ್ಯದರ್ಶಿ ಕುಮಾರ್,  ಸೇವಾದಳ ಸದಸ್ಯೆ ಗೀತಾ ಚನ್ನಬಸಪ್ಪ ಹಾದಿಮನಿ ಹಾಜರಿದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.