ADVERTISEMENT

ಗುಲ್ಬರ್ಗ: ಬಿಜೆಪಿಗೆ ಮತ್ತೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST

ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಮಳಖೇಡ ಮತಕ್ಷೇತ್ರದ ಶರಣಪ್ಪ ವೀರಶೆಟ್ಟಿ ಪೊಲೀಸ್ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಭಂಕೂರ ಮತಕ್ಷೇತ್ರದ ಪಾರ್ವತಿ ಚೌಹಾಣ್ ಆಯ್ಕೆಯಾಗಿದ್ದಾರೆ.

ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಶರಣಪ್ಪ ಅವರು ಕಾಂಗ್ರೆಸ್‌ನ ಗುರುಲಿಂಗಪ್ಪ ಗೌಡ ಅವರನ್ನು ಮತ್ತು ಪಾರ್ವತಿ ಅವರು ಕಾಂಗ್ರೆಸ್‌ನ ಅನಿತಾ ವಳಕೇರಿ ಅವರನ್ನು 22-19 ಮತಗಳ ಅಂತರದಲ್ಲಿ ಸೋಲಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಒಟ್ಟು 15 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅಂತಿಮವಾಗಿ 6 ಅಂಗೀಕೃತವಾಗಿತ್ತು. ಈ ಪೈಕಿ ನಾಲ್ಕು ಸದಸ್ಯರು ಕೊನೆಯ ಕ್ಷಣದಲ್ಲಿ ಹಿಂತೆಗೆದುಕೊಂಡರು. ಕೊನೆಯದಾಗಿ ಬಿಜೆಪಿಯ ಶರಣಪ್ಪ ಮತ್ತು ಕಾಂಗ್ರೆಸ್‌ನ ಗುರುಲಿಂಗಪ್ಪ ನಡುವೆ ನೇರ ಸ್ಪರ್ಧೆ ನಡೆಯಿತು.
 
ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು 4 ನಾಮಪತ್ರ ಸಲ್ಲಿಸಿದ್ದು, 3 ಅಂಗೀಕೃತಗೊಂಡಿತ್ತು. ಈ ಪೈಕಿ ಒಬ್ಬರು ಹಿಂತೆಗೆದುಕೊಂಡರು. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ನಡೆಯಿತು ಎಂದು ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.