ADVERTISEMENT

ಚುನಾವಣೆಗಾಗಿ ಮಹಾತ್ಮರ ನೆನಪು: ಸ್ವಾಮೀಜಿ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ದಾವಣಗೆರೆ: ರಾಜಕಾರಣಿಗಳಿಗೆ ಚುನಾವಣೆ ಸಮೀಪಿಸಿದಾಗ ಮಾತ್ರ ಬಸವಣ್ಣ, ಕಿತ್ತೂರು ಚನ್ನಮ್ಮ, ಅಂಬೇಡ್ಕರ್ ಅವರಂತಹ ಮಹಾನ್‌ಪುರುಷರು ನೆನಪಾಗುತ್ತಾರೆ ಪಂಚಮಸಾಲಿ ಪೀಠದ ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಟೀಕಿಸಿದರು.

ನಗರದ ಬಿಎಸ್‌ಎನ್‌ಎಲ್ ಕಚೇರಿ ವೃತ್ತದಲ್ಲಿ ದಾಸ ಶ್ರೇಷ್ಠ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾ ಹೋರಾಟ ಸಮಿತಿಯು  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ಥಾಪನೆಗೆ  ಹಮ್ಮಿಕೊಂಡಿದ್ದ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಒಂದು ವರ್ಷ ಹಬ್ಬ ಮಾಡುವುದನ್ನು ನಿಲ್ಲಿಸಿದರೆ ಬೃಹತ್ ಪ್ರತಿಮೆ ಸ್ಥಾಪಿಸಬಹುದು. ಪಾಲಿಕೆಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಸ್ಥಾಪನೆಗೆ ಪ್ರಯತ್ನಿಸಲಾಗುವುದು  ಎಂದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿದರು. ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಕೆ. ಮಲ್ಲಪ್ಪ, ಮೇಯರ್ ಎಚ್.ಎನ್. ಗುರುನಾಥ್, ಉಪ ಮೇಯರ್ ರತ್ನಾಬಾಯಿ, `ಡೂಡ~ ಅಧ್ಯಕ್ಷ  ಮಲ್ಲಕಾರ್ಜುನಪ್ಪ, ಎಚ್.ಎಂ. ರುದ್ರಮುನಿ ಸ್ವಾಮಿ, ಆಯುಕ್ತ ಪ್ರಸನ್ನಕುಮಾರ್, ಟಿ. ದಾಸಕರಿಯಪ್ಪ, ಬಿ.ಎಂ. ಸತೀಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.