ADVERTISEMENT

ಜಾತಿ, ಮತದ ಗಡಿ ದಾಟಿದರೆ ಮಾತ್ರ ಕವಿಯಾಗಬಲ್ಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಚಿತ್ರದುರ್ಗ: ಜಾತಿ, ಮತ, ಪಂಥದ ಗಡಿ ದಾಟದವರಿಗೆ ಬರೆಯುವ ಯೋಗ್ಯತೆ ಇಲ್ಲ. ಎಲ್ಲವನ್ನೂ ದಾಟಿದಾಗ ಅವನು ಕವಿಯಾಗುತ್ತಾನೆ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಗೆಳೆಯರ ಬಳಗ, ಕನ್ನಡ ಸಾಹಿತ್ಯ ಪರಿಷತ್, ಚಿಂತನ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ `ನಮ್ಮೂರ ನೆಂಟರು~ ಮಾಲಿಕೆ ಅಡಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಜಾತಿ, ಮತ, ಪಂಥದ ಗಡಿ ದಾಟದ ಲೇಖಕ ಎಸ್.ಎಲ್. ಭೈರಪ್ಪ ಕೆಸರುಗುಂಡಿಯಲ್ಲಿ ಬಿದ್ದಿದ್ದಾರೆ. ವೈದಿಕ ಪರಿಸರ ದಾಟಲು ಅವರಿಗೆ ಆಗುತ್ತಲೇ ಇಲ್ಲ. ಆದ್ದರಿಂದಲೇ ಅವರನ್ನು ಸಂದೇಹಿಸುತ್ತಿದ್ದೇವೆ ಎಂದು ನುಡಿದರು.

ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿ, ಎಚ್‌ಎಸ್‌ವಿ ಅವರು ನವ್ಯದ ಉತ್ತುಂಗದಲ್ಲಿ  ಸಾಹಿತ್ಯ ಕ್ಷೇತ್ರಕ್ಕೆ ಬಂದರೂ ನವ್ಯ ಮೀರಿ ಬರೆಯಲು ಮುಂದಾದರು. ಎಲ್ಲ ಪ್ರಕಾರಗಳಲ್ಲೂ ಬರೆದು ಅನನ್ಯತೆ ಸಾಧಿಸಿದ್ದಾರೆ ಎಂದರು.

ಡಾ.ಸಂಗೇನಹಳ್ಳಿಅಶೋಕ್‌ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಸತ್ಯನಾರಾಯಣ ರೆಡ್ಡಿ, ಛಾಯಾಗ್ರಾಹಕ ಟಿ.ಎಂ. ವೀರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.