ADVERTISEMENT

ಜಾತಿ-ಮತ ಭೇದ ಸಲ್ಲದು: ಅನ್ಸಾರಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:30 IST
Last Updated 16 ಫೆಬ್ರುವರಿ 2011, 18:30 IST

ಕುಕನೂರು: ದೇಶದಲ್ಲಿರುವ ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಅಂಶವನ್ನು ಅರಿತುಕೊಂಡು ಜಾತಿ-ಮತ ಭೇದ ಎಂಬ ಭ್ರಮೆಯಿಂದ ಹೊರಬರಬೇಕೆಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕರೆ ನೀಡಿದರು. ಅಂಜುಮನ್ ಸಮಿತಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮುಸ್ಲಿಂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.‘ಯಾವುದೇ ಸಮಾಜ ಅಭಿವೃದ್ಧಿ ಆಗಬೇಕಾದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು.’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಖತೀಬ್ ಇಮಾಮ್ ಮಸ್ಜೀದೆ ಯೂಸೂಫಿಯಾ, ಬೆದವಟ್ಟಿ ಶಿವಸಂಗಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಜಿಪಂ ಸದಸ್ಯ ಈರಪ್ಪ ಕುಡಗುಂಟಿ, ಮಾಜಿ ಸದಸ್ಯ ಸಿ.ಎಚ್.ಪೊಲೀಸ್ ಪಾಟೀಲ, ಉದ್ಯಮಿ ಸತ್ಯನಾರಾಯಣ ಹರಪನಹಳ್ಳಿ ಮಾತನಾಡಿದರು.

ಗೌಸುದ್ದೀನ್‌ಸಾಬ ಬನ್ನಿಕಟ್ಟಿ, ತಾಪಂ ಸದಸ್ಯರಾದ ಶೇಖರಪ್ಪ ವಾರದ, ರೇಣುಕಾ ಬೆದವಟ್ಟಿ, ದಾವಲಸಾಬ ಕುದರಿ, ಗುರುಲಿಂಗಯ್ಯ ಹಿರೇಮಠ, ಸುಭಾಷ ತಾಲೇಡಾ ಉಪಸ್ಥಿತರಿದ್ದರು.
ಕಾಶೀಮಸಾಬ ತಳಕಲ್ ಸ್ವಾಗತಿಸಿದರು. ಅಬ್ದುಲ್‌ಸಾಬ ತಳಕಲ್ ಪ್ರಾಸ್ತಾವಿಕ ಮಾತನಾಡಿದರು. ವೈ.ಚಮನ್‌ಸಾಬ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.