ADVERTISEMENT

ಜಾನಪದ ಅಕಾಡೆಮಿಗೆ ವೆಬ್‌ಸೈಟ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಹುಬ್ಬಳ್ಳಿ: ಮಾಹಿತಿ ತಂತ್ರಜ್ಞಾನದ ಲೋಕಕ್ಕೆ ಪ್ರವೇಶಿಸಿದ ಅಕಾಡೆಮಿಗಳು ಹಾಗೂ ಸರ್ಕಾರಿ ಸಂಸ್ಥೆಗಳ ಸಾಲಿಗೆ ಸೇರಲು ರಾಜ್ಯ ಜಾನಪದ ಅಕಾಡೆಮಿ ಕೂಡ ಸಿದ್ಧವಾಗಿದೆ.

ಅಕಾಡೆಮಿಯ ಕಾರ್ಯಕ್ರಮಗಳು, ಯೋಜನೆಗಳ ಮತ್ತಿತರ ಮಾಹಿತಿಗಳು ಬೆರಳ ತುದಿಯಲ್ಲಿ ಸಿಗುವಂತೆ ಮಾಡುವ ಉದ್ದೇಶದಿಂದ ವೆಬ್‌ಸೈಟ್ ಸಿದ್ಧವಾಗುತ್ತಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ.

`ರಾಜ್ಯ ಗಣಕ ಪರಿಷತ್ ವೆಬ್‌ಸೈಟ್‌ನ ವಿನ್ಯಾಸ ಮಾಡಿದ್ದು ಶೀರ್ಷಿಕೆ ನೀಡುವುದು ಸೇರಿದಂತೆ ಅಂತಿಮ ಸಿದ್ಧತೆಗಳು ನಡೆಯುತ್ತಿವೆ~ ಎಂದು ಅಕಾಡೆಮಿ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.