ADVERTISEMENT

ಜೇವರ್ಗಿ: ಆಮರಣ ಉಪವಾಸ ಆರಂಭ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 10:33 IST
Last Updated 18 ಜೂನ್ 2013, 10:33 IST

ಜೇವರ್ಗಿ:  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಾಖೆ ವತಿಯಿಂದ ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಯಿತು.

ಪ್ರತಿಭಟನೆಯ ನೇತತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪುಂಡಲಿಕ ಗಾಯಕವಾಡ ಮಾತನಾಡಿ, ಸೊನ್ನ ರೈತರ ಹೋಲದಲ್ಲಿ ಅಡ್ಡ ಎಸ್ಕೇಪ ಕಾಮಗಾರಿ ತಕ್ಷಣ ಪ್ರಾರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಬೇಕು, ಉದ್ದೇಶ ಪೂರ್ವಕವಾಗಿ ಮೂರು ವರ್ಷದವರೆಗೆ ದಲಿತರ ಜಮೀನು ಹಾಳಾಗುವುದಕ್ಕೆ ಕಾರರರಾದ ಎಂಜಿನಿಯರಗಳಾದ ಸುರೇಶ ಜಾದವ ಹಾಗೂ ತಿಮ್ಮಪ್ಪ ಇವರನ್ನು ತಕ್ಷಣ ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು.

`ಕಳೆದ ಮಾರ್ಚ್ 13ರಂದು ಶಾಹಪೂರ ತಾಲೂಕಿನ ಭೀಮರಾಯನ ಗುಡಿ ಮುಖ್ಯ ಇಂಜೀನಿಯರರ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹ ಮಾಡಿದಾಗ  ಮುಖ್ಯ ಎಂಜಿನಿಯರ್ ಬಿ.ವೈ.ಜುಮನಾಳ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್  ಚೌಕಾ, ಎಲ್.ಎಮ್, ನಾಯಕ ಅವರು, 15ರಿಂದ 30 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಈಡೇರಿಲ್ಲ. ಅವರ ಮೇಲೆ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು, ಮೂರು ವರ್ಷದಿಂದ ಕಾಲುವೆ ನೀರು ಹರಿದು 7ಎಕರೆ-20ಗುಂಟೆ ಜಮೀನು  ಹಾಳಾಗಿದ್ದು ಇದೇ ಜಮೀನು ನಂಬಿಕೊಂಡು ಬದುಕುತ್ತಿರುವ ಕುಟುಂಬದವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು' ಎಂದು ಗಾಯಕವಾಡ ಆಗ್ರಹಿಸಿದರು.

ಶಿವಪ್ಪ ಮಲ್ಲಪ್ಪ, ಶಾಂತಪ್ಪ ಶಿವಪ್ಪ, ಶರಣಮ್ಮ ಶಾಂತಪ್ಪ, ಶಿವಲಿಂಗ ಕಣಮೇಶ್ವರ ಅವರು ಸೋಮವಾರದಿಂದ ಅಮರಣ ಉಪವಾಸ ಪ್ರಾರಂಭಿಸಿದ್ದಾರೆ. ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ಸಿದ್ರಾಮ ಕಟ್ಟಿ, ಶ್ರೀಶೈಲ ಬುಟ್ನಾಳ, ರಾಮಚಂದ್ರ ಧರೇನ, ಲಕ್ಷ್ಮಣ ಜಮಖಂಡಿ, ಶಿವಪುತ್ರ ಹಾಗರಗಿ, ಮೌನೇಶ ಜಳಕಿ, ಶಂಕರ ಸುಂಟ್ಯಾಣ, ಗುಂಡಪ್ಪ ಜಡಗಿ, ಚಿದಾನಂದ ಗೌನಳ್ಳಿ, ಭಾಗರೇಡ್ಡಿ ಹೋತಿನ ಮಡು ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.