ADVERTISEMENT

ದುಶ್ಚಟಕ್ಕೆ ಬಲಿಯಾಗಬೇಡಿ: ಗೋಪಾಲಕೃಷ್ಣ ಬೇಳೂರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 6:40 IST
Last Updated 7 ಫೆಬ್ರುವರಿ 2011, 6:40 IST

ರಿಪ್ಪನ್‌ಪೇಟೆ: ಯುವಶಕ್ತಿ ದುಶ್ಚಟಗಳಿಗೆ ಬಲಿಯಾಗದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಅನರ್ಹ ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದರು.

 ಇಲ್ಲಿನ ಗಾಂಧಿ ಮೈದಾನದಲ್ಲಿ ಸಿದ್ಧಿ ವಿನಾಯಕ ವಾಲಿಬಾಲ್ ಕ್ಲಬ್ ವತಿಯಿಂದ ಶನಿವಾರ ನಡೆದ 5ನೇ ವರ್ಷದ ರಾಜ್ಯಮಟ್ಟದ ಹೊನಲು -ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಪಂ. ಸದಸ್ಯ ಕಲಗೋಡು ರತ್ನಾಕರ ಮಾತನಾಡಿ, ಸರ್ಕಾರದ ಸವಲತ್ತು ಪಡೆದು ಗ್ರಾಮೀಣ ಯುವಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವಂತಾಗಬೇಕು ಎಂದರು.

ಜಾಗೃತ ಯುವಜನ ಅಧ್ಯಕ್ಷ ಟಿ.ಆರ್. ಕೃಷ್ಣಪ್ಪ ವಾಲಿಬಾಲ್ ಥ್ರೋ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಮಿತಿ ಅಧ್ಯಕ್ಷ ಎಂ.ಬಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಹಿರಿಯ ಕ್ರೀಡಾಪಟು ಸಿ. ಪ್ರಭಾಕರ ಹಾಗೂ  ಯುವ ಪ್ರತಿಭೆ ಸಂತೋಷ ಮತ್ತು ರವಿ ಅವರ ಆತ್ಮಕ್ಕೆ ಶಾಂತಿ ಕೋರಿ  ಮೌನಾಚರಣೆ ನಡೆಯಿತು.
ರೋಟರಿ ನೂತನ ಅಧ್ಯಕ್ಷ ಎಂ.ಬಿ. ಲಕ್ಷ್ಮಣ್‌ಗೌಡ, ತಾ.ಪಂ. ಸದಸ್ಯೆ ನಾಗರತ್ನಾ ದೇವರಾಜ್, ಗ್ರಾ.ಪಂ. ಅಧ್ಯಕ್ಷೆ ಮಹಾಲಕ್ಷ್ಮೀ ಅಣ್ಣಪ್ಪ, ಜಿಲ್ಲಾ ವಾಲಿಬಾಲ್ ಸಂಸ್ಥೆ ಕಾರ್ಯದರ್ಶಿ ಕೆ.ಎಸ್. ಶಶಿ, ಮುಖಂಡರಾದ ಬೆಳ್ಳೂರು ತಿಮ್ಮಪ್ಪ, ಆರ್. ರಾಘವೇಂದ್ರ ರಬ್ಬರ್ ಬೋರ್ಡ್ ಅಧ್ಯಕ್ಷ ಪಿ.ಜೆ. ವರ್ಗೀಸ್ ಮತ್ತಿತರರು  ಹಾಜರಿದ್ದರು.

ವಿಜೇತರು
 ಬೆಂಗಳೂರಿನ ಜೈ ಗಣೇಶ ತಂಡ (ಪ್ರಥಮ), ಬೆಂಗಳೂರಿನ  ಸಿಕ್ಸ್‌ಹಾರ್ಸ್‌ (ದ್ವಿತೀಯ), ಶಿವಮೊಗ್ಗ ಯುನೈಟೆಡ್ (ತೃತೀಯ) ಹಾಗೂ ಬಳ್ಳಾರಿಯ ಜಿಂದಾಲ್ (ಚತುರ್ಥ) ಸ್ಥಾನಗಳಿಸಿ,  ನಗದು ಬಹುಮಾನ ಮತ್ತು ಪಾರಿತೋಷಕ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.