ADVERTISEMENT

ನಕಲಿ ಔಷಧಿ ಮಾರಾಟ ತಡೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 17:35 IST
Last Updated 23 ಫೆಬ್ರುವರಿ 2011, 17:35 IST
ನಕಲಿ ಔಷಧಿ ಮಾರಾಟ ತಡೆಗೆ ಕ್ರಮ
ನಕಲಿ ಔಷಧಿ ಮಾರಾಟ ತಡೆಗೆ ಕ್ರಮ   

ಹುಬ್ಬಳ್ಳಿ: ‘ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ನಕಲಿ ಔಷಧಿ ಜೊತೆಗೆ ನಕಲಿ ಸೌಂದರ್ಯ ವರ್ಧಕ ವಸ್ತುಗಳ ಮಾರಾಟವೂ ಇದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಬುಧವಾರ ಭರವಸೆ ನೀಡಿದರು.

ನಗರದ ತಾಜ್‌ನಗರದಲ್ಲಿ ನಿರ್ಮಿಸಲಾದ ಔಷಧ ನಿಯಂತ್ರಣ ಇಲಾಖೆಯ ಪ್ರಾದೇಶಿಕ ಉಪಔಷಧ ನಿಯಂತ್ರಕರ ಕಚೇರಿ ಹಾಗೂ ಸಹಾಯಕ ಔಷಧ ನಿಯಂತ್ರಕರ ಕಚೇರಿಯ ನೂತನ ಕಟ್ಟಡದ  ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೆಂಗಳೂರಲ್ಲಿ ಮಾತ್ರ ಔಷಧ ಹಾಗೂ ಸೌಂದರ್ಯ ವರ್ಧಕ ವಸ್ತುಗಳ ನಿಯಂತ್ರಕರ ಕಚೇರಿಯಿತ್ತು. ಈ ಕಚೇರಿಯ ಒತ್ತಡ ಕಡಿಮೆ ಮಾಡುವ ಸಲುವಾಗಿ ಜೊತೆಗೆ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ಸಲುವಾಗಿ ಹುಬ್ಬಳ್ಳಿಯಲ್ಲಿ ಔಷಧ ನಿಯಂತ್ರಣ ಕಚೇರಿಯನ್ನು ಆರಂಭಿಸಲಾಗಿ ಎಂದರು. ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಚಂದ್ರಕಾಂತ ಬೆಲ್ಲದ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಮಟ್ಟದ ಔಷಧ ವಿತರಣೆಯಾಗುತ್ತಿದೆ. ಇದರ ನಿಯಂತ್ರಣ ಆಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.