
ಪ್ರಜಾವಾಣಿ ವಾರ್ತೆಬೇಲೂರು: `ವಿಧಾನ ಪರಿಷತ್ತಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ನನ್ನ ಮತ ತಿರಸ್ಕೃತವಾಗಲು ಮಾಜಿ ಶಾಸಕ ಅಂಜನಾಮೂರ್ತಿ ಕಾರಣ~ ಎಂದು ಬೇಲೂರು ಶಾಸಕ ರುದ್ರೇಶಗೌಡ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, `ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಮತ ಚಲಾವಣೆಗೆ ನನಗೆ ಸಹಾಯಕರನ್ನಾಗಿ ಮಾಜಿ ಶಾಸಕ ಅಂಜನಾಮೂರ್ತಿ ಅವರನ್ನು ಕಳುಹಿಸಿದ್ದರು. ನನ್ನ ಪರವಾಗಿ ಅವರೇ ಮತ ಚಲಾವಣೆ ಮಾಡಿದ್ದಾರೆ. ಮತ ತಿರಸ್ಕಾರಗೊಂಡಿರುವುದಕ್ಕೆ ಅವರೇ ಹೊಣೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.