
ಪ್ರಜಾವಾಣಿ ವಾರ್ತೆಹುಬ್ಬಳ್ಳಿ: ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಮಂದಗೆರೆ- ಹೊಳೆನರಸೀಪುರ ಮಧ್ಯೆ ಮಾನವ ರಹಿತ ಲೆವೆಲ್ ಕ್ರಾಸಿಂಗ್‌ನಲ್ಲಿ ಸಬ್‌ವೇ ನಿರ್ಮಾಣ ಮಾಡಬೇಕಿರುವುದರಿಂದ ಇದೇ 24ರಂದು ಬೆಳಿಗ್ಗೆ 11.50ರಿಂದ ರಾತ್ರಿ 7.30ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ನಿರ್ಬಂಧಿಸಲಾಗಿದೆ.
ಆ ದಿನ ಶಿವಮೊಗ್ಗ ಟೌನ್-ಮೈಸೂರು ಪ್ಯಾಸೆಂಜರ್ (ನಂ. 56269) ರೈಲು ಹಾಸನ ಮತ್ತು ಮೈಸೂರು ನಡುವೆ ಸಂಚರಿಸುವುದಿಲ್ಲ. ಈ ರೈಲು ಹಾಸನದಿಂದಲೇ ವಾಪಸ್ ಅರಸೀಕೆರೆಗೆ ತೆರಳಲಿದೆ. ಮೈಸೂರು-ಅರಸೀಕೆರೆ ಪ್ಯಾಸೆಂಜರ್ ರೈಲು ಸಂಚಾರವನ್ನೂ ರದ್ದುಗೊಳಿಸಲಾಗಿದೆ. ರಾತ್ರಿ 7.15ಕ್ಕೆ ಹೊಳೆನರಸೀಪುರದಿಂದ ತೆರಳಬೇಕಿರುವ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (ನಂ. 56265) ರೈಲು ಹೊಳೆನರಸೀಪುರದಿಂದ 15 ನಿಮಿಷ ತಡವಾಗಿ ಹೊರಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.