ADVERTISEMENT

ಬಾಬೂಜಿ ಆದರ್ಶ ಪಾಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2011, 19:30 IST
Last Updated 5 ಏಪ್ರಿಲ್ 2011, 19:30 IST
ಬಾಬೂಜಿ ಆದರ್ಶ ಪಾಲಿಸಲು ಸಲಹೆ
ಬಾಬೂಜಿ ಆದರ್ಶ ಪಾಲಿಸಲು ಸಲಹೆ   

ಶ್ರೀರಂಗಪಟ್ಟಣ: ಶೋಷಿತ ವರ್ಗದಲ್ಲಿ ಹುಟ್ಟಿ ಉಪ ಪ್ರಧಾನಿಯಂತಹ ಮಹತ್ವದ ಸ್ಥಾನಕ್ಕೇರಿದ ಬಾಬು ಜಗಜೀವನರಾಂ ಅವರ ಮಾರ್ಗದರ್ಶನದಲ್ಲಿ ಯುವ ಜನರು ಮುನ್ನಡೆಯಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಬಾಬು ಜಗಜೀವನರಾಂ ಅವರ 104ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದಲ್ಲಿ ಜಾತೀಯತೆ, ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ದಿನಗಳಲ್ಲಿ ಬಾಬೂಜಿ ಕಷ್ಟ ಕೋಟಲೆಗಳನ್ನು ಅನುಭವಿಸಿದ್ದಾರೆ. ತಾವು ಹುಟ್ಟಿದ ಸಮುದಾಯದ ಋಣ ತೀರಿಸಲು ಶ್ರಮಿಸಿದ್ದಾರೆ. ರಕ್ಷಣೆ ಹಾಗೂ ಕಾರ್ಮಿಕ ಸಚಿವರಾಗಿ ಮಾದರಿ ಕೆಲಸ ಮಾಡಿದ್ದಾರೆ. ಅವರ ಪ್ರೌಢಿ ಮೆ ಹಾಗೂ ಸಾಮಾಜಿಕ ಕಳಕಳಿಗೆ ಎಲ್ಲರೂ ಗೌರವ ಕೊಡಬೇಕು ಎಂದರು.

ಹಿರಿಯ ವಕೀಲ ಮಾಳಪ್ಪಗೌಡ ಪ್ರಧಾನ ಭಾಷಣ ಮಾಡಿದರು. ತಹಶೀಲ್ದಾರ್ ಮೆರಣಿಗೆಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತದಿಂದ ಟಿಎಪಿಸಿಎಂಎಸ್ ಸಮುದಾಯ ಭವನದವರೆಗೆ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು.

ತಾ.ಪಂ. ಅಧ್ಯಕ್ಷ ಟಿ.ಶ್ರೀಧರ್, ಪುರಸಭೆ ಅಧ್ಯಕ್ಷ ಎಲ್.ನಾಗರಾಜು, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ನಾಗರಾಜಯ್ಯ, ಜಿ.ಪಂ. ಸದಸ್ಯೆ ಲಿಂಗರಾಜಿ ರಂಗನಾಥಕುಮಾರ್, ಬಾಬೂಜಿ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ಅಲ್ಲಾಪಟ್ಟಣ ಕುಮಾರ್, ಆಲಗೂಡು ಮಹೇಶ್, ಕುಬೇರಪ್ಪ, ಜಿ.ಪಂ. ಮಾಜಿ ಸದಸ್ಯ ಮೂಗಯ್ಯ, ರೇಷ್ಮೆ ಸಹಾಯಕ ನಿರ್ದೇಶಕ ಶಕೀಲ್ ಅಹಮದ್, ಕೃಷಿ ಸಹಾಯಕ ನಿರ್ದೇಶಕಿ ಎಚ್.ಎನ್.ಮಮತಾ, ತೋಟಗಾರಿಕೆ ಇಲಾಖೆಯ ನೇತ್ರಾವತಿ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.